Mukesh ambani
ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆ : ಕಾರಿನ ಮಾಲೀಕನ ಶವ ಪತ್ತೆ..!
ಭಾರತದ ಆಗರ್ಭ ಶ್ರೀಮಂತ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮನೆ ಮುಂದೆ ಕಾರಿನಲ್ಲಿ ಸ್ಪೋಟಕಗಳು ಪತ್ತೆಯಾದ ಪ್ರಕರಣಕ್ಕೆ ಒಂದಾದ ಮೇಲೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಇದೀಗ ಮತ್ತೊಂದು ಹೊಸ ತಿರುವ ಪಡೆದಿದೆ ಈ ಕೆಸ್. ಈ ಕಾರಿನಲ್ಲಿ ಒಂದು ಪತ್ರ ಸಹ ಪತ್ತೆಯಾಗಿತ್ತು. ಇದ್ರಲ್ಲಿ ಇದು ಜಸ್ಟ್ ಟ್ರೇಲರ್ ಅಷ್ಟೇ ಪಿಕ್ಚರ್ ಅಭೀ ಬಾಕಿ ಹೇ ಎನ್ನುವಂತಹ ಸಂದೇಶ ನೀಡುವ ಮೂಲಕ ದೊಡ್ಡ ಅನಾಹುತ ಸಂಕೇತ ನೀಡಲಾಗಿತ್ತು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಅಂಬಾನಿ (mukesh ambani) ಮನೆ ಮುಂದೆ ಸೆಕ್ಯುರಿಟಿ ಟೈಟ್ ಮಾಡಲಾಗಿದೆ.
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬಂಗಾಳದಲ್ಲಿ ಶುರುವಾಯ್ತು ‘ಮಾ’ ಕ್ಯಾಂಟೀನ್..!
ಅಲ್ದೇ ಇದರ ಹಿಂದೆ ಜೈಷ್ ಅಲ್ ಹಿಂದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಸಂಘಟನೆಯೇ ಒಪ್ಪಿಕೊಂಡಿರುವುದಾಗಿ ಟೆಲಿಗ್ರಾಮ್ ಸಂದೇಶದ ಸುದ್ದಿಯೂ ವೈರಲ್ ಆಗಿತ್ತು. ಆದ್ರೆ ಇದು ನಕಲಿ ಪತ್ರ , ನಕಲಿ ಸುದ್ದಿ ಎಂದು ಇತ್ತೀಚೆಗೆ ಪೊಲೀಸರು ಸ್ಪಷ್ಟನೆ ನೀಡಿದ್ದರು.
ಆದ್ರೆ ಇದೀಗ 20 ಜಿಲೆಟಿನ್ ಕಡ್ಡಿ ಹಾಗೂ ಬೆದರಿಕೆ ಪತ್ರ ಪತ್ತೆಯಾಗಿ ಕಾರಿನ ಮಾಲೀಕನ ಮಾಹಿತಿ ಸಿಕ್ಕಿದೆ. ಕಾರಿನ ಚಾಲಕ ಮನ್ಸುಕ್ ಹಿರೇನ್ ಅವರ ಶವ ನಾಗ್ಪುರ ಪೊಲೀಸರು ಪತ್ತೆಯಾಗಿದೆ. ಮನ್ಸೂಕ್ ಹಿರೇನ್ ಅವರ ದೇಹ ಕೆಸರಿನಲ್ಲಿ ಪತ್ತೆಯಾಗಿದ್ದು, ದೇಹವನ್ನು ಸ್ವಚ್ಛಗೊಳಿಸಿದಾಗ ಮನ್ಸೂರ್ ಹಿರೇನ್ ಬಾಯಿಯಲ್ಲಿ 5 ಕರ್ಚಿಫ್ ಗಳು ಪತ್ತೆಯಾಗಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ದಿನಗಳೆದಂತೆಲ್ಲಾ ನುಣುಚಿಕೊಳ್ಳುತ್ತಲೇ ಇದ್ದು, ಮುಂದೆ ಒಯಾವೆಲ್ಲಾ ಟ್ವಿಸ್ಟ್ ಸಿಗಲಿದೆ ಕಾದು ನೋಡ್ಬೇಕಾಗಿದೆ.