Su-30MKI ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯುಶಸ್ವಿ….

1 min read

Su-30MKI ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯುಶಸ್ವಿ….

ಇದೇ ಮೊದಲ ಬಾರಿಗೆ ಸು-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿ ಆವೃತ್ತಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಉಡಾವಣೆಯು ಯೋಜಿಸಿದಂತೆ ಕ್ಷಿಪಣಿಯು ಬಂಗಾಳಕೊಲ್ಲಿ ಪ್ರದೇಶದಲ್ಲಿ ಗೊತ್ತುಪಡಿಸಿದ ಗುರಿಯ ಮೇಲೆ ನಿಖರ ದಾಳಿ ಮಾಡಿದೆ.

Su-30MKI ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ ಶ್ರೇಣಿಯ ಆವೃತ್ತಿಯ ಮೊದಲ ಉಡಾವಣೆ ಇದಾಗಿದೆ ಎಂದು ವಾಯುಪಡೆ ಹೇಳಿದೆ. ಇದರೊಂದಿಗೆ, ಭಾರತೀಯ ವಾಯುಪಡೆಯು Su-30MKI ವಿಮಾನದಿಂದ ಭೂಮಿ/ಸಮುದ್ರ ಗುರಿಗಳ ಮೇಲೆ ಬಹಳ ದೂರದ ವ್ಯಾಪ್ತಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಭಾರತೀಯ ನೌಕಾಪಡೆ, ಡಿಆರ್ ಡಿಒ, ಬಿಎಪಿಎಲ್ ಮತ್ತು ಎಚ್ಎಎಲ್ ಭಾರತೀಯ ವಾಯುಪಡೆಗಳ ಪ್ರಯತ್ನದೊಂದಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.  ಬ್ರಹ್ಮೋಸ್ ನ ವಿಸ್ತೃತ ಆವೃತ್ತಿಯ ಕ್ಷಿಪಣಿಯಿಂದಾಗಿ ಸು-30ಎಂಕೆಐ ಯುದ್ಧವಿಮಾನಗಳ ಶಕ್ತಿ ವೃದ್ದಿಯಾಗಿದೆ.

ಭವಿಷ್ಯದ ಯುದ್ಧಗಳ ದೃಷ್ಟಿಕೋನದಿಂದ ಐಎಎಫ್ ಈ ಮೌಲ್ಯೀಕರಣವನ್ನು ಪ್ರಮುಖ ಎಂದು ಕರೆದಿದೆ. ‘ಇದರೊಂದಿಗೆ ಸು-30MKI ವಿಮಾನದಿಂದ ಭೂಮಿ/ಸಮುದ್ರ ಗುರಿಯ ವಿರುದ್ಧ ಬಹಳ ದೂರದವರೆಗೆ ನಿಖರವಾದ ಸ್ಟ್ರೈಕ್‌ಗಳನ್ನು ನಡೆಸುವ ಸಾಮರ್ಥ್ಯವನ್ನು IAF ಸಾಧಿಸಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd