ಫಹದ್ ನಟನೆಯ ಧೂಮಂ ಚಿತ್ರಕ್ಕೆ ಇಂದಿನಿಂದ ಚಾಲನೆ….
ಕೆಜಿಎಫ್ ಮತ್ತು ಕಾಂತಾರ ಚಿತ್ರಗಳ ಹಿಟ್ ನಂತರ ಹೊಂಬಾಳೆ ಫಿಲಂಸ್ ಅಳೆದು ತೂಗಿ ಒಂದೊಳ್ಳೆ ಚಿತ್ರಗಳನ್ನ ಹಿಡಿದುಕೊಳ್ಳುತ್ತಿದೆ.
ಹೊಂಬಾಳೆ ಫಿಲಂಸ್ ಇದೀಗ ಮಲಯಾಳಂ ಸ್ಟಾರ್ ಫಹದ್ ಫಾಸಿಲ್ ಅವರ ಜೊತೆ ಧೂಮಂ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಯು-ಟರ್ನ್ ಮತ್ತು ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಪರ್ಣಾ ಬಾಲಮುರಳಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಹೊಂಬಾಳೆ ಸಂಸ್ಥೆ ದೂಮಂ ಮುಹೂರ್ತದ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ಫಹದ್ ಮತ್ತು ಅಪರಣ ಬಾಲಮುರಳಿ ಹೊರತುಪಡಿಸಿ, ಧೂಮನ್ ಚಿತ್ರದಲ್ಲಿ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್ ಮತ್ತು ಅನು ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಧೂಮಂ ಹೊಂಬಾಳೆ ಫಿಲಂಸ್‌ನ ಎರಡನೇ ಮಲಯಾಳಂ ಚಿತ್ರ, ಹೊಂಬಾಳೆ ಈಗಾಗಲೇ ಪೃಥ್ವಿರಾಜ್ ಅವರ ಟೈಸನ್ ಚಿತ್ರ ಮಾಡುತ್ತಿದೆ.
ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಧೂಮಂ ಚಿತ್ರ ತೆರೆಗೆ ಬರಲಿದೆ. ಧೂಮಂ ಹೊರತಾಗಿ, ಹೊಂಬಾಳೆ ಫಿಲ್ಮ್ಸ್ ಸಲಾರ್, ರಾಘವೇಂದ್ರ ಸ್ಟೋರ್ಸ್, ಬಗೀರಾ, ರಿಚರ್ಡ್ ಆಂಟನಿ ಮತ್ತು ಸುಧಾ ಕೊಂಗರ ಜೊತೆಗಿನ ಹೆಸರಿಡದ ಚಿತ್ರ ನಿರ್ಮಿಸುತ್ತಿದೆ.
Fahadh Faasil and Pawan Kumar Dhumam goes on floors.