ಚಂದನವನದ ಖ್ಯಾತ ಸಾಹಸ ನಿರ್ದೇಶಕ (stunt master), ಮಲಯಾಳಂ ಮೂಲದ ಜಾಲಿ ಬಾಸ್ಟಿನ್ (Jolly Bastin) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಚಿತ್ರಗಳ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಇವರು ಇತ್ತೀಚಿನ ಸ್ಟಂಟ್ ಮಾಸ್ಟರ್ ಆಗಿ ಬಹುಬೇಡಿಕೆ ಹೊಂದಿದ್ದರು. ಜಾಲಿ ಬಾಸ್ಟಿನ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಪ್ರೇಮಲೋಕ ಸೇರಿದಂತೆ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಇವರೇ ಸಾಹಸ ನಿರ್ದೇಶನ ಮಾಡಿದ್ದರು. ಶಾಂತಿ ಕ್ರಾಂತಿಗಾಗಿ ಇವರೇ ಕೆಲಸ ಮಾಡಿದ್ದಾರೆ. ಇವರು ಕೇರಳ ರಾಜ್ಯದವರಾಗಿದ್ದರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರು ಇತ್ತೀಚೆಗೆ ದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.