ಕೊರೊನಾ ದಿನಗಳ ನಂತರ ಚಿತ್ರರಂಗದಲ್ಲಿ ಮದುವೆಯ ಸದ್ದು ಹೆಚ್ಚಾಗುತ್ತಿದೆ. ಸದ್ಯ ಈ ಸಾಲಿಗೆ ಮತ್ತೊಬ್ಬ ಖ್ಯಾತ ನಟಿ ಬಂದು ನಿಂತಿದ್ದಾರೆ. ನಾಯಕಿ ನಟಿ ನಿತ್ಯಾ ಮೆನನ್ ಅವರು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.
ನಟಿ ನಿತ್ಯಾ ಅವರು ಪ್ರೀತಿಸುತ್ತಿದ್ದು, ಅವರನ್ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ನಿತ್ಯಾ ಮೆನನ್ ಮದುವೆ ಸುದ್ದಿಯನ್ನು ನಿರಾಕರಿಸಿದ್ದರು. ಈಗ ಸದ್ದಿಲ್ಲದೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ವರ್ಷಗಟ್ಟಲೆ ಮದುವೆ ಸುದ್ದಿಯನ್ನು ಅಲ್ಲಗಳೆದಿರುವ ನಿತ್ಯಾ ಮೆನನ್, ಈಗ ಸದ್ದಿಲ್ಲದೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
ನಿತ್ಯಾ ಮೆನನ್ ಇಂಡಸ್ಟ್ರಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಕನ್ನಡ ಸೇರಿದಂತೆ ಹಲವು ಬಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಲಾಮರ್ ತೋರಿಸದೆ ತಮ್ಮ ನಟನೆಯಿಂದಲೇ ನಿತ್ಯಾ ಅಪಾರ ಅಭಿಮಾನಿಗಳನ್ನು ಅವರು ಗಳಿಸಿದ್ದಾರೆ. ಸದ್ಯ ಅವರ ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.