ಮಲಯಾಳಂನ ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ.
ಒರು ಅಡಾರ್ ಲವ್ ಚಿತ್ರ ಸೇರಿದಂತೆ ಹಲವಾರು ಉತ್ತಮ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಒಮರ್ ಲಲ್ಲು (Omar Lulu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಅತ್ಯಾಚಾರ ನಡೆಸಿರುವ ಕುರಿತು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆದರೆ, ಈ ಆರೋಪವನ್ನು ನಿರ್ದೇಶಕ ತಳ್ಳಿ ಹಾಕಿದ್ದು, ನನ್ನ ಗೌರವ ಹಾಳು ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಲ್ಲುಗೆ ಮಧ್ಯಂತರ ಜಾಮೀನು ಕೂಡ ಸಿಕ್ಕಿದೆ.