ಹೋಟೆಲ್ ಕೋಣೆಯ ವಿಡಿಯೋ ಹಂಚಿಕೊಂಡಿದ್ದಕ್ಕೆ ವಿರಾಟ್ ಕೋಪ….
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಹೋಟೆಲ್ ನ ರೂಮ್ ನಲ್ಲಿಏನಿದೆ ಎನ್ನುವುದನ್ನ ನೊಡಬಹುದು.
ಈ ಅನ್ ಸೀನ್ ವಿಡಿಯೋವನ್ನ ವಿರಾಟ್ ಕೊಹ್ಲಿಗೆ ತಿಳಿಯದೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನಂತರ ವಿರಾಟ್ ಕೋಪಗೊಂಡು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಂಥಹ ವಿಡಿಯೋ ಗಳು ಖಾಸಗಿ ತನವನನ್ನ ಉಲ್ಲಂಘಿಸುತ್ತವೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡ ಸಧ್ಯ ಪರ್ತ್‌ನಲ್ಲಿ ಬೀಡು ಬಿಟ್ಟಿರುವುದರಿಂದ ಈ ವೀಡಿಯೊ ಪರ್ತ್‌ನಲ್ಲಿರುವ ಹೋಟೆಲ್‌ನಿಂದಲೇ ಎಂದು ಅಂದಾಜಿಸಲಾಗಿದೆ.
https://www.instagram.com/reel/CkXVWI6g7Ff/?utm_source=ig_embed&ig_rid=fd94a523-3213-47b0-ac7c-ce0217af4c75
ವಿರಾಟ್ ಕೊಹ್ಲಿ Instagram ನಲ್ಲಿ ಬರೆದುಕೊಂಡಿರುವ ಪ್ರಕಾರ
ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಬಗ್ಗೆ ತಿಳಿಯಲು ನೋಡಲು ಬೇಟಿಯಾಗಲು ಬಯಸುತ್ತಾರೆ ಎಂಬುದು ತಿಳಿದಿದೆ. ಇದನ್ನ ನಾನು ಯಾವಾಗಲೂ ಮೆಚ್ಚುತ್ತೇನೆ . ಆದರೆ ಈ ವಿಡಿಯೋ ಬೆಚ್ಚಿಬೀಳಿಸುತ್ತಿದೆ.
ನನ್ನ ಸ್ವಂತ ಹೋಟೆಲ್ ಕೋಣೆಯಲ್ಲಿ ನಾನು ಗೌಪ್ಯತೆಯನ್ನು ಪಡೆಯದಿದ್ದರೆ, ಬೇರೆಲ್ಲಿ ಪಡೆಯಬಹುದು ? ನನ್ನ ಖಾಸಗಿತನದ ಸಂಪೂರ್ಣ ಉಲ್ಲಂಘನೆಯಾಗಿದೆ. ದಯವಿಟ್ಟು ಜನರ ಖಾಸಗಿತನವನ್ನು ಗೌರವಿಸಿ ಮತ್ತು ಯಾರನ್ನೂ ಮನರಂಜನೆಯ ಸಾಧನವಾಗಿ ಪರಿಗಣಿಸಬೇಡಿ.’ ಎಂದು ಪೋಸ್ಟ್ ಮಾಡಿದ್ದಾರೆ.
Fan takes video of Virat Kohli’s hotel room, cricketer appalled by ‘absolute invasion of privacy’