ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ತೀವ್ರ ಟೀಕೆಗೆ ಗುರಿಯಾಗುತ್ತಿದೆ.
ರಾಮನಾಗಿ ಪ್ರಭಾಸ್ ಹಾಗೂ ಕೃತಿ ಸೋನನ್ (Kriti Sanon) ಸೀತೆಯಾಗಿ ನಟಿಸಿದ ‘ಆದಿಪುರುಷ್’ ಸಿನಿಮಾ ರಾಮ ಹಾಗೂ ಹನುಮನ ಭಕ್ತರಿಗೆ ಸಿನಿಮಾ ಇಷ್ಟವಾದರೆ, ಮತ್ತೊಂದು ವರ್ಗವರ ಟೀಕೆಗೆ ಕಾರಣವಾಗಿದೆ. ಆದಿಪುರುಷ್’ ಸಿನಿಮಾ ಯಶಸ್ಸು ಕಾಣಬಹುದು ಎಂದು ಕೆಲವರು ಭಾವಿಸಿದ್ದರು. ಟೀಸರ್ ಹಾಗೂ ಟ್ರೇಲರ್ ನೋಡಿದ ಒಂದು ವರ್ಗದ ಜನರಿಗೆ ಸಿನಿಮಾ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಪಡೆಯಬಹುದು ಎಂಬ ಅಂದಾಜು ಇತ್ತು. ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಈ ಸಂದರ್ಭದಲ್ಲಿಯೇ ಪ್ರಭಾಸ್ ಅಮೆರಿಕಾಕ್ಕೆ ತೆರಳಿದ್ದಾರೆ.
‘ಆದಿಪುರುಷ್’ ಸಿನಿಮಾ ಅಮೆರಿಕದಲ್ಲೂ ರಿಲೀಸ್ ಆಗಿದೆ. ಅಲ್ಲಿರುವ ಭಾರತೀಯರು ಈ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅಲ್ಲಿನ ಜನರ ಜೊತೆ ಕುಳಿತು ಪ್ರಭಾಸ್ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇತ್ತೀಚೆಗೆ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದರು. ಈಗ ಮತ್ತೊಮ್ಮೆ ಅವರು ಸರ್ಜರಿಗೆ ಒಳಗಾಗಬೇಕಿದೆ.
ಆದಿಪುರುಷ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.







