ವಿರಾಟ್ ಕೊಹ್ಲಿಗೆ (Virat Kohli) ಗೆ ದೇಶ ಅಷ್ಟೇ ಅಲ್ಲದೇ, ವಿದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ.
ಸದ್ಯ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿಯೂ (Asia Cup 2023) ಕಿಂಗ್ ಕೊಹ್ಲಿ ಮಾಡಿರುವ ಕಾಮಿಡಿಯ ದೃಶ್ಯವೊಂದು ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸೂಪರ್ 4 ಸುತ್ತಿನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ (India vs Bangladesh) ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದೆ. ಈ ಪಂದ್ಯದ ಸಂದರ್ಭದಲ್ಲಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡ ಕೊಹ್ಲಿ ಅಭಿಮಾನಿಗಳನ್ನು ಹುಚ್ಚೆದ್ದು ನಗುವಂತೆ ಮಾಡಿದ್ದಾರೆ.
ಬಾಂಗ್ಲಾದೇಶದ ಇನಿಂಗ್ಸ್‌ನ 10 ನೇ ಓವರ್‌ನ ಅಂತ್ಯದ ನಂತರ ತಂಡಗಳಿಹೆ ಡ್ರಿಂಕ್ಸ್ ಬ್ರೇಕ್ ನೀಡಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಚಿತ್ರ ರೀತಿಯಲ್ಲಿ ಓಡುತ್ತ ಆಟಗಾರರ ಬಳಿಗೆ ಬಂದರು. ಇದನ್ನು ಕಂಡು ಸಹ ಆಟಗಾರರು ನಕ್ಕರು. ಅಲ್ಲದೇ, ಅವರ ಸ್ಪಿರಿಟ್ ಕಂಡು ಜನರು ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ.