ಚಿಕ್ಕಬಳ್ಳಾಪುರ: ತಂದೆಯೊಬ್ಬ ಮಗನಿಗೆ (Son) ಈಜು (Swimming) ಕಲಿಸಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಕೋನಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಂಗಡಿ ಬಾಬು (45) ಸಾವನ್ನಪ್ಪಿದ ದುರ್ದೈವಿ. ಬಾಬು ತನ್ನ ಮಗ ತೇಜುವಿಗೆ ಗ್ರಾಮದ ಕೆ.ನಾರಾಯಣಸ್ವಾಮಿ ಎಂಬವರ ಕೃಷಿ ಹೊಂಡದಲ್ಲಿ ಈಜು ಕಲಿಸಲು ತೆರಳಿದ್ದ. ಮಗನಿಗೆ ತರಬೇತಿ ನೀಡಿ ದಡಕ್ಕೆ ತಲುಪಿಸಿದ್ದಾರೆ.
ಆನಂತರ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದು, ಮತ್ತೆ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆಗ ಮಗ ಜೋರಾಗಿ ಕಿರುಚಾಡಿದ್ದಾನೆ. ಅಕ್ಕಪಕ್ಕದ ಜಮೀನಿನವರು ಬಂದು ಬಾಬುವನ್ನ ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಕುರಿತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.