Crime: ಮದುವೆಗೆ ಹಣವಿಲ್ಲವೆಂದ ಮಗಳನ್ನೇ ಕೊಂದ ಪಾಪಿ
1 min read
ಮದುವೆಗೆ ಹಣವಿಲ್ಲವೆಂದ ಮಗಳನ್ನೇ ಕೊಂದ ಪಾಪಿ
ಮಹಾರಾಷ್ಟ್ರ: ಮಗಳಿಗೆ ಮದುವೆ ಮಾಡಲು ಹಣವಿಲ್ಲವೆಂದು ತಂದೆ ಮಗಳನ್ನೇ ಕೊಲೆ ಮಾಡಿರುವ ಘಟನೆ ಮಹರಾಷ್ಟ್ರದ ನಾಂದೇಡ್ನ ಜಮಖೇಡ್ದಲ್ಲಿ ನಡೆದಿದೆ.
18 ವರ್ಷದ ಸಿಂಧು ಮೃತ ದುರ್ದೈವಿ. ರೈತ ಬಾಲಾಜಿ ಕೊಲೆ ಮಾಡಿದ ಪಾಪಿ ಅಪ್ಪ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಂಧುವಿನ ಮದುವೆ ಮಾಡುವ ಉದ್ದೇಶದಿಂದ ಪೋಷಕರು ಕೆಲ ದಿನಗಳಿಂದ ಹಣ ಹೊಂದಾಣಿಕೆಯ ಕೆಲಸ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪ್ರತಿದಿನ ದಂಪತಿ ನಡುವೆ ಜಗಳವಾಗ್ತಿತ್ತು. ನಿನ್ನೆ ಕೂಡಾ ಜಗಳವಾಗಿದೆ. ಈ ವೇಳೆ ಬಾಲಾಜಿ ಕಟ್ಟಿಕೊಂಡ ಹೆಂಡತಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ಬೆನ್ನಲ್ಲೇ ಪಾಪಿ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವನ್ನಪ್ಪಿರುವ ಸಿಂಧುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.