ಹೆಂಡತಿ ಅನೈತಿಕ ಸಂಬಂಧ | ಹಳ್ಳಕ್ಕೆ ಬಿದ್ದು ತಂದೆ – ಮಗ ಆತ್ಮಹತ್ಯೆ
ಮಂಡ್ಯ : ಹೆಂಡತಿಯ ಅನೈತಿಕ ಸಂಬಂಧ ಮತ್ತು ಕಿರುಕುಳಕ್ಕೆ ಬೇಸತ್ತು ಡೆತ್ನೋಟ್ ಬರೆದಿಟ್ಟು ತಂದೆ ಮತ್ತು 7 ವರ್ಷದ ಗಂಡು ಮಗ ಹಳ್ಳದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಾಗಮಂಗಲದ ಲಾಳನಕೆರೆಯಲ್ಲಿ ನಡೆದಿದೆ.
38 ವರ್ಷದ ಗಂಗಾಧರ್ ಗೌಡ, 7 ವರ್ಷದ ಜಸ್ವಿತ್ ಮೃತ ವ್ಯಕ್ತಿಗಳಾಗಿದ್ದಾರೆ. ಗಂಗಾಧರ್ ಗೌಡ, ಮೊದಲು ಮಗನನ್ನು ನೀರಿಗೆ ತಳ್ಳಿ ಸಾಯಿಸಿದ್ದಾರೆ.
ಬಳಿಕ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಹಳ್ಳದ ಪಕ್ಕದಲ್ಲಿ ಚಪ್ಪಲಿ, ಮೊಬೈಲ್ ಫೋನ್ ಹಾಗೂ ಡೆತ್ನೋಟ್ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಗಳನ್ನ ಹೊರತೆಗೆದಿದ್ದಾರೆ.