ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಿಂದಾಗಿ ನಟಿ ರಾಗಿಣಿ ದ್ವಿವೇದಿಗೆ ಬಂಧನ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ಎನ್ಡಿಪಿಎಸ್ ವಿಶೇಷ ಕೋರ್ಟ್ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸೆಷನ್ಸ್ ಕೋರ್ಟ್, ಸಿಸಿಬಿ ಪೊಲೀಸರಿಗೆ ನೊಟೀಸ್ ಜಾರಿ ಮಾಡಿದೆ. ಜತೆಗೆ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.
ಈ ನಡುವೆ, ನಟಿ ರಾಗಿಣಿ ವಿರುದ್ಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ರಾಗಿಣಿ ಅವರ ವಿಚಾರಣೆ ಮುಂದುವರೆದಿದೆ. ಬೆಳಿಗ್ಗೆ 11.30ರ ಸುಮಾರಿಗೆ ಸಿಸಿಬಿ ವಿಚಾರಣೆ ಆರಂಭವಾಗಿದ್ದು, ಸತತ 7 ಗಂಟೆಗಳ ಕಾಲ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಕಾರಣ ರಾಗಿಣಿ ಅವರನ್ನು ಇಂದು ವಿಚಾರಣೆ ನಡೆಸಿ ಮನೆಗೆ ವಾಪಸ್ ಕಳಿಸುತ್ತಾರಾ ಅಥವಾ ಸಿಸಿಬಿ ಪೊಲೀಸರು ಬಂಧಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...