ಬೆಂಗಳೂರು: ಮಧ್ಯ ಪ್ರಾಚ್ಯ ದೇಶಗಳಾದ ಇಸ್ರೇಲ್- ಇರಾನ್ ಮಧ್ಯೆ ಯುದ್ಧ (Israel Iran War) ಭೀತಿ ಆವರಿಸಿದ್ದು, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ (USA Recession) ದ ವಾತಾವರಣ ಸೃ,ಟಿಯಾಗಿದೆ.
ಷೇರು ಮಾರುಕಟ್ಟೆಯಲ್ಲಿ (Share Market) ಭಾರೀ ಇಳಿಕೆ ಕಂಡು ಬರುತ್ತಿದ್ದು, ಸಂಪತ್ತು ಒಂದೇ ದಿನದಲ್ಲಿ 17 ಲಕ್ಷ ಕೋಟಿ ರೂ. ಕರಗಿದೆ. ಇಂದು ಗಿಫ್ಟ್ ನಿಫ್ಟಿ 300 ಅಂಕ ಇಳಿಕೆಯಾಗಿದೆ. ಈ ಕಾರಣದಿಂದ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸೆನ್ಸೆಕ್ಸ್ 2,500 ಅಂಕ ಪತಗೊಂಡರೆ ನಿಫ್ಟಿ 760 ಅಂಕ ಇಳಿಕೆಗೊಂಡಿದೆ.
ಅಷ್ಟೇ ಅಲ್ಲದೇ, ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆ (Job Growth) ನಿರೀಕ್ಷೆಗಿಂತಲೂ ಕಡಿಮೆಯಾಗಿದೆ. ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕೇವಲ 1,14,000 ಉದ್ಯೋಗಿಳ ನೇಮಕವಾಗಿದೆ ಎಂದು ವರದಿ ಮಾಡಿತ್ತು. ಅಲ್ಲದೇ, ಹಿಂದಿನ ತಿಂಗಳು ಇನ್ನೂ 1,75,000 ಉದ್ಯೋಗಿಗಳ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ ಪ್ರತಿ ತಿಂಗಳು 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ಅಮೆರಿಕದಲ್ಲಿ ನಿರುದ್ಯೋಗ (Unemployment) ದರವು 4.3%ಕ್ಕೆ ಏರಿಕೆಯಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ಜಪಾನಿನ ಕೇಂದ್ರ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಜಪಾನ್ (Bank Of Japan) ಬಡ್ಡಿದರವನ್ನು 0.25% ಏರಿಕೆ ಮಾಡಿದೆ. ಪರಿಣಾಮ ಜಪಾನ್ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಏಷ್ಯಾ ಸೇರಿದಂತೆ ವಿಶ್ವದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ಸೋಮವಾರ ದಾಳಿ ನಡೆಸಹುದು ಅಮೆರಿಕ ಹೇಳಿಕೆಯೂ ಪರಿಣಾಮ ಬೀರಿದೆ. ಲಾಭಾಂಶ ಕಡಿಮೆ ಆಗಿರುವುದರಿಂದ ಭಾರತದ ಮಾರುಕಟ್ಟೆಯಿಂದ ಹೂಡಿಕೆದಾರರು ಹಣವನ್ನು ತೆಗೆದಿದ್ದಾರೆ.