ಜೆರುಸಲೇಂ: ಹಿಜ್ಬುಲ್ಲಾ ಹಾಗೂ ಇಸ್ರೇಲ್ ಮದ್ಯೆ ಭೀಕರ ಯುದ್ಧ ಆರಂಭವಾಗಿದ್ದು, ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್ (Israel) ಮೇಲೆ ಇರಾನ್ ನೂರಾರು ಕ್ಷಿಪಣಿಗಳ ಮಳೆ ಸುರಿಸಿದೆ. ಹೀಗಾಗಿ ಇಸ್ರೇಲಿ ಪಡೆಗಳು ಲೆಬನಾನ್ ಮೇಲೆ ಸೇಡಿನ ದಾಳಿ ನಡೆಸಿದೆ.
ಲೆಬನಾನ್ನ (Lebanon) ಅಲ್-ಬೆಕಾ ಕಣಿವೆಯಲ್ಲಿರುವ ಹಲ್ಬಟಾ ಮತ್ತು ಜಬುದ್ ಪಟ್ಟಣಗಳ ಮೇಲೆ ವೈಮಾನಿಕ ದಾಳಿ ನಡೆದಿದೆ.
ಹಿಜ್ಬುಲ್ಲಾ ವಿರುದ್ಧ ಯುದ್ಧದಲ್ಲಿ ಇಸ್ರೇಲ್ ನ ಗಾರ್ಡ್ ಕಮಾಂಡರ್ (Guards commander) ಮತ್ತು ಇತರ ನಾಯಕರು ಜೀವ ಕಳೆದುಕೊಂಡಿದ್ದಾರೆ.
ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ, ಇಸ್ರೇಲ್ ಕೂಡ, ಇರಾನ್ಗೆ ಎಚ್ಚರಿಕೆ ನೀಡಿತ್ತು. ನಂತರ ಲೆಬನಾನ್ನ ಬೈರೂತ್ ನಲ್ಲಿರುವ ಹಿಜ್ಬುಲ್ಲಾ ಶಿಬಿರಗಳ ಮೇಲೆ ಇಸ್ರೇಲ್ ಸೇನೆ ಬಾಂಬ್ ಮಳೆ ಸುರಿಸಿದೆ. ಈ ಮೂಲಕ ಹಿಜ್ಬುಲ್ಲಾ ಭದ್ರಕೋಟೆ ಎನಿಸಿಕೊಂಡಿರುವ ಸೇನಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ.
ವಿಶ್ವಸಂಸ್ಥೆಯ ಆಂಟೋನಿಯೊ ಗುಟೆರೆಸ್, ಒಂದು ವಾರದ ಹಿಂದೆ ಭದ್ರತಾ ಮಂಡಳಿಗೆ ಲೆಬನಾನ್ನ ಪರಿಸ್ಥಿತಿ ಬಗ್ಗೆ ವರದಿ ಮಾಡಿದ್ದಾರೆ.