Sandalwood : ಗಟ್ಟಿಮೇಳ ನಟ ರಕ್ಷಿತ್ ಮತ್ತು ಟೀಮ್ ವಿರುದ್ಧ FIR ದಾಖಲು..!!!
ಬೆಂಗಳೂರು : ಕನ್ನಡದ ಜನಪ್ರಿಯ ಧಾರಾವಾಹಿಯಾಗಿರುವ ಗಟ್ಟಿಮೇಳದ ನಾಯಕ ನಟ ರಕ್ಷಿತ್ ಹಾಗೂ ಅವರ ಗೆಳೆಯವರ ವಿರುದ್ಧ ಕುಡಿದು ರಂಪಾಟ , ಹಾಗೂ ಕೋವಿಡ್ ನಿಯಮ ಉಲ್ಲಂಘನೆಗಾಗಿ FIR ದಾಖಲಾಗಿದೆ.. ರಕ್ಷಿತ್ ಜೊತೆಗೆ FIR ಆರ್ ನಲ್ಲಿ ಉಲ್ಲೇಖಿಸಲಾಗಿರುವ ಇತರರು ಅದೇ ದಾರವಾಹಿಯ ನಟರು ಹಾಗೂ ಸಿಬ್ಬಂದಿಯಾಗಿದ್ದಾರೆ.. ಇವರು ಕೆಲ ದಿನಗಳ ಹಿಂದೆ ಕೆಂಗೇರಿ ಬಳಿಯ ಜಿಂಜರ್ ಲೇಕ್ ವ್ಯೂ ಹೋಟೆಲ್ ಬಳಿ ಕುಡಿದು ರಂಪಾಟ ಮಾಡಿ ಕೋವಿಡ್ ಕರ್ಫ್ಯೂ ನಿಯಮವನ್ನೂ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ..
FIR Filed against gattimela serial actor rakshith , and other co stars
KGF 2 : ‘ರಾಕಿ ಬಾಯ್’ ಗಾಗಿ ಬರುತ್ತಿದ್ದಾಳೆ ಡ್ಯಾನ್ಸ್ ದೀವಾ ನೋರಾ..!!!
ಸ್ಥಳೀಯರು ದೂರು ನೀಡಿದ ನಂತರ ಸ್ಥಳಕ್ಕೆ ತೆರಳಿದ್ದ ಪೊಲೀಸರು ಇವರಿಗೆ ಬುದ್ದಿ ಹೇಳಿ ಮನೆಗೆ ತೆರಳುವಂತೆ ಹೇಳಿದ್ರು ರಂಪಾಟ ಮಾಡಿದ್ರು ಎನ್ನಲಾಗಿದೆ.. ಹೀಗಾಗಿಯೇ ಪೊಲೀಸರು ಇಬ್ಬರು ಮಹಿಳೆಯರು ರಕ್ಷಿತ್ ಸೇರಿ ಐವರು ಪುರುಷರನ್ನ ಬಂಧಿಸಿದ್ದರು.. ನಂತರ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ.. ರಕ್ಷಿತ್ , ಅದೇ ಧಾರಾವಾಹಿಯ ಸಹ ನಟ ಅಭಿಷೇಕ್ , ರಾಕೇಶ್ ಕುಮಾರ್ , ರವಿಚಂದ್ರನ್ , ರಂಜನ್ , ಅನುಷಾ , ಶರಣ್ಯ ವಿರುದ್ಧ FIR ದಾಖಲಾಗಿದೆ.. ಕೆಂಗೇರಿ ಪೊಲೀಸ್ ಠಾಣೆಯ ಎಎಸ್‌ಐ ನಾಗರಾಜು ದೂರು ದಾಖಲಿಸಿದ್ದಾರೆ.