ಒಣ ಹುಲ್ಲಿಗೆ ಬೆಂಕಿ : ಮೂವರು ಮಕ್ಕಳ ಸಜೀವ ದಹನ
ಒಣ ಹುಲ್ಲಿಗೆ ಬೆಂಕಿ ಬಿದ್ದು ಮೂವರು ಮಕ್ಕಳು ಸುಟ್ಟ ಕರಕಲಾಗಿರುವ ದಾರುಣ ಘಟನೆಯೊಂದು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಮಡಿಹಾನ್ನಲ್ಲಿ ನಡೆದಿದೆ.
ಮೂವರೂ ಕೂಡ 7 ವರ್ಷದೊಳಗಿನ ಮಕ್ಕಳಾಗಿದ್ದಾರೆ.. 7 ವರ್ಷದ ಸುನೈನಾ, 3 ವರ್ಷದ ರಾಣಿ, 5 ವರ್ಷದ ಹರ್ಷಿತ್ ಮೃತ ಮಕ್ಕಳಾಗಿದ್ದಾರೆ.. ಒಣ ಹುಲ್ಲಿಗೆ ಬೆಂಕಿ ಬಿದ್ದ ವೇಳೆ ಅಲ್ಲೇ ಇದ್ದ ಇದ್ದ ಮಕ್ಕಳು ಸಜೀವ ದಹನವಾಗಿದ್ದಾರೆ.
ಒಣಹುಲ್ಲಿನ ಬಣವೆಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗಲೇ ದಿಢೀರ್ ಬೆಂಕಿ ಹೊತ್ತಿದ ಪರಿಣಾಮ ಈ ಘಟನೆ ಸಂಭವಿಸಿದೆ..