ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಮನೆಗೆ…
ಕೊನೆಯ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಡೇಂಜರ್ ಝೂನ್‌ಗೆ ಬಂದಿದ್ದರು. ಅಂತಿಮವಾಗಿ ಚೈತ್ರಾ ಅವರು ತಮ್ಮ ಬಿಗ್ ಬಾಸ್ ಆಟ ಮುಗಿಸಿದರು ಎಂಬುದು ಗೊತ್ತಾಯಿತು. ಎಲ್ಲರಿಗೂ ಕೊನೆಯಲ್ಲಿ ಭಾವುಕವಾಗಿ ವಿದಾಯ ಹೇಳಿದ ಚೈತ್ರಾ ದೊಡ್ಮನೆಯಿಂದ ಹೊರಗೆ ಬಂದರು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಧನರಾಜ್, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾಧವ್, ರಜತ್ ಮತ್ತು ಹನುಮಂತ ತಮ್ಮ ಬಿಗ್ ಬಾಸ್ ಆಟ ಮುಂದುವರಿಸಿದ್ದಾರೆ.








