Firozabad: ಟ್ರಕ್ ಗೆ ಬಸ್ ಡಿಕ್ಕಿ 6 ಮಂದಿ ಸಾವು 22 ಮಂದಿಗೆ ಗಾಯ…
ವೇಗವಾಗಿ ಬಂದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದು ಹೊಡೆದು ಆರು ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್ ಬಳಿ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ನಡೆದಿದೆ. ಇನ್ನೂ 21 ಜನರು ಅಪಘಾತದಲ್ಲಿ ಗಾಯಗೊಂಡಿದ್ದು, ಸೈಫೈ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ (ಉತ್ತರ ಪ್ರದೇಶ) ದಲ್ಲಿ ಮುಂಜಾನೆ 4:30 ಕ್ಕೆ ಬಸ್ ಲುಧಿಯಾನದಿಂದ ರಾಯ್ ಬರೇಲಿಗೆ 50 ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಬಸ್ ಚಾಲಕ ನಿದ್ದೆ ಮಾಡಿದ್ದರಿಂದ ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಅಪಘಾತ ಸ್ಥಳದಿಂದ ಬಸ್ ನ್ನು ತೆಗೆದು ತನಿಖೆ ನಡೆಸುತ್ತಿದ್ದಾರೆ.
Firozabad: 6 dead, 22 injured in bus collision with truck






