ಟೀಮ್ ಇಂಡಿಯಾಕ್ಕೆ ಟೆಸ್ಟ್ ಸರಣಿಯಲ್ಲಿ ಚಾಲೆಂಜ್, ಬ್ಯಾಟ್ಸ್ಮನ್ಗಳ ಮೇಲಿದೆ ಕಣ್ಣು..!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆ ಟೀಮ್ ಇಂಡಿಯಾ ತಯಾರಿ ನಡೆಸಿಕೊಳ್ಳುತ್ತಿದೆ.
ನವೆಂಬರ್ 25ರಿಂದ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ.
ಕಿವೀಸ್ ವಿರುದ್ಧದ ಟೆಸ್ಟ್ ಸರಣಿ ಟೀಮ್ ಇಂಡಿಯಾದ ಪಾಲಿಗೆ ಟೆಸ್ಟಿಂಗ್ ಟೈಮ್ ಆಗಿರಲಿದೆ.
ಈಗಾಗಲೇ ಮೊದಲ ಟೆಸ್ಟ್ ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ಕೊಡಲಾಗಿದೆ.
ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಅಲಭ್ಯರಾಗಿದ್ದಾರೆ.
ಮೊಹಮ್ಮದ್ ಶಮಿ, ಜಸ್ ಪ್ರಿತ್ ಬುಮ್ರಾ ಕೂಡ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾಕ್ಕೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸವಾಲಿನದ್ದಾಗಿದೆ.
ಈ ಮಧ್ಯೆ ಕೆ.ಎಲ್. ರಾಹುಲ್ ಕೂಡ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದಾರೆ.
ಅಜಿಂಕ್ಯಾ ರಹಾನೆ ಮೊದಲ ಟೆಸ್ಟ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಹೀಗಾಗಿ ತಂಡದ ಬ್ಯಾಟಿಂಗ್ ಲೈನ್ ಅಪ್ ಕೂಡ ಬದಲಾಗಲಿದೆ.
ಮಯಾಂಕ್ ಅಗರ್ವಾಲ್ ಜೊತೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಟಾಪ್ ಆರ್ಡರ್ನ ಟ್ರಂಪ್ ಕಾರ್ಡ್ಗಳು.
ಆದರೆ ಮಧ್ಯ ಸರದಿಯಲ್ಲಿ ಹೊಸಬ ಸೂರ್ಯ ಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಆಧಾರವಾಗಬೇಕಿದೆ.
ಆಲ್ರೌಂಡರ್ ಸ್ಲಾಟ್ನಲ್ಲಿ ಅಕ್ಸರ್ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ನಲ್ಲಿ ಶಕ್ತಿಯಿದ್ದರೂ ಬ್ಯಾಟಿಂಗ್ ಬಗ್ಗೆ ಕೊಂಚ ಗಲಿಬಿಲಿ ಇದ್ದೇ ಇದೆ. ಹೀಗಾಗಿ ಕಾನ್ಪುರ ಟೆಸ್ಟ್ ಟೀಮ್ ಇಂಡಿಯಾಕ್ಕೆ ನಿಜವಾಗಲೂ ಅಗ್ನಿಪರೀಕ್ಷೆಯನ್ನು ಒಡ್ಡಲಿದೆ.