ಫಿಕ್ಸಾಯಿತು ಬಾಲಿವುಡ್ ನ ಲವ್ ಬರ್ಡ್ಸ್ನ ಮದುವೆ ಡೇಟ್
ಬಾಲಿವುಡ್ ನ ಸೂಪರ್ ಹಿಟ್ ಹಿರೋಯಿನ್ ಬೆಳ್ಳಕ್ಕಿಯೇ ನಾಚುವಂತ ಮೈಬಣ್ಣದ ಆಲಿಯಾ ಭಟ್ ನಟಿಸಿದ ಗಂಗುಬಾಯಿ ಕಥಿಯಾವಾಡಿ, ತ್ರಿಬಲ್ ಆರ್ ಚಿತ್ರಗಳು ಸೂಪರ್ ಹಿಟ್ ಕಂಡಿದ್ದು, ಈಗ ಆಲಿಯಾ ಭಟ್ ಹಾಲಿವುಡ್ ಕಡೆ ಮುಖಮಾಡಿದ್ದಾರೆ. ಈ ಮಧ್ಯೆ ಬಾಲಿವುಡ್ ನ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಬ್ರೇಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಈ ಪ್ರೀತಿಯ ಪಾರಿವಾಳಗಳು ಪಾರ್ಟಿ, ಪಬ್, ಫೆಸ್ಟಿವಲ್ ಅಂತ ಡೇಟ್ ಮಾಡುತ್ತಿರೋ ವಿಷಯ ಬಾಲಿವುಡ್ ಗೆ ಮತ್ತು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಅಷ್ಟೇ ಅಲ್ಲದೇ ಈ ಜೋಡಿಗಳ ಮದುವೆ ವಿಚಾರದ ಕುರಿತು ಗಾಸಿಪ್ ಹರದಾಡುತ್ತಿತ್ತು. ಈ ಗಾಸಿಪ್ ಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ಹೌದು ಇವರ ಮದುವೆ ಮತ್ತು ಮದುವೆಯಾಗುವ ಸ್ಥಳವನ್ನು ನಿಗದಿ ಪಡಿಸಿವೆ.
ಇದೇ ವರ್ಷ ಏಪ್ರಿಲ್ 2ನೇ ವಾರದಲ್ಲಿ ಸಪ್ತಪತಿ ತುಳಿಯಲಿದ್ದಾರೆ. ಅಲ್ಲದೇ ಮದುವೆ ರಾಜಸ್ಥಾನದಲ್ಲೋ ಅಥವಾ ಇಟಲಿಯಲ್ಲಿ ಅಲ್ಲ, ಮುಂಬೈನ ಆರ್ ಕೆ ಹೌಸ್ ನಲ್ಲಿ ನಡೆಯಲಿದೆಯಂತೆ. ಆರ್ ಕೆ ಹೌಸ್ ನಲ್ಲಿ ನಡೆಯುವುದಕ್ಕೂ ಒಂದು ಕಾರಣವಿದೆ ರಾಜ್ ಕಪೂರ್ ಮತ್ತು ನೀತು ಕಪೂರ್ ಮದುವೆಯಾಗಿತ್ತು. ಅಪ್ಪ ಅಮ್ಮನ ಮದುವೆ ಅಲ್ಲಿಯೇ ಆಗಿದ್ದರಿಂದ ಈಗ ತಮ್ಮ ಮದುವೆಯೂ ಅಲ್ಲೇ ಆಗಲೀ ಎಂದು ಆಸೆ ಪಟ್ಟಿದ್ದಾರಂತೆ.