ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಅಲ್ಲಿನ ಮಂಡಿ ಜಿಲ್ಲೆಯ ಹಲವೆಡೆ ನಿನ್ನೆಯಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಿಗಿದೆ. ಜಾಂಜೆಹ್ಲಿ ಎಂಬಲ್ಲಿನ ಹಳ್ಳದಲ್ಲಿ ಹಠಾತ್ ಪ್ರವಾಹದಿಂದಾಗಿ ಹಲವಾರು ವಾಹನಗಳು ಕೊಚ್ಚಿಹೋಗಿವೆ.
ನದಿಯ ಕೆಳಭಾಗದಲ್ಲಿರುವ ಅನೇಕ ಮನೆಗಳು ಅಪಾಯದ ಮಟ್ಟ ಎದುರಿಸುತ್ತಿವೆ. ಅನೇಕ ಸ್ಥಳಗಳಲ್ಲಿ ಭೂಕುಸಿತದ ಘಟನೆಗಳು ವರದಿಯಾಗಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮಂಡಿ ಮೂಲಕ ಹರಿಯುವ ಬಿಯಾಸ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಂತ್ಲಾದಲ್ಲಿ ಮಳೆಯಿಂದಾಗಿ ಭಾರೀ ಹಾನಿಯಾಗಿದೆ.
ಕುಲು ಜಿಲ್ಲೆಯಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಕುಲು ಪಟ್ಟಣದ ಬಳಿಯ ಮೊಹಲ್ ನದಿಯಲ್ಲಿ ಎಂಟು ವಾಹನಗಳು ಕೊಚ್ಚಿ ಹೋಗಿವೆ ಎಂದು ತಿಳಿದು ಬಂದಿದೆ.








