100% ಪ್ರಯಾಣಿಕರನ್ನು ಕರೆದೊಯ್ಯಲು ವಿಮಾನ ಸಂಸ್ಥೆಗಳಿಗೆ ಅನುಮತಿ..!
ಕೋವಿಡ್ ಹಾವಳಿ ಕಡಿಮೆಯಾಗ್ತಿರೋ ಬೆನ್ನಲ್ಲೇ ಸರ್ಕಾರವು ಕೆಲ ನಿಯಮಗಳನ್ನ ಸಡಿಲಗೊಳಿಸುತ್ತಿದೆ. ಇದೀಗ ವಿಮಾನಯಾನ ಸಂಸ್ಥೆಗಳಿಗೆ ಹಬ್ಬದ ಸೀಸನ್ ನಲ್ಲಿ ರಿಲೀಫ್ ಸಿಕ್ಕಿದೆ. ಅಕ್ಟೋಬರ್ 18ರಿಂದ ದೇಶೀಯ ವಿಮಾನಯಾನ ಸಂಸ್ಥೆಗಳು ಸಂಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗುತ್ತಿದೆ.
2020 ರ ಮೇ ನಿಂದ ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನಯಾನ ಸಾಮರ್ಥ್ಯವನ್ನು ಮಿತಿಗೊಳಿಸಿದೆ. . ಆಗಸ್ಟ್ 12ರಿಂದ ಸೆಪ್ಟೆಂಬರ್ 18 ರ ನಡುವೆ ಶೇ.72ರಷ್ಟು ಸಾಮರ್ಥ್ಯ ಮಿತಿ ಇತ್ತು. ಜುಲೈ 5 ಮತ್ತು ಆಗಸ್ಟ್ 12ರ ಅವಧಿಯಲ್ಲಿ ಶೇ.65ರ ಮಿತಿ ಇತ್ತು. ನಿಗದಿತ ದೇಶೀಯ ವಾಯುಯಾನ ಕಾರ್ಯಾಚರಣೆಯು ಅಕ್ಟೋಬರ್ 18ರಿಂದ ಯಾವುದೇ ಸಾಮರ್ಥ್ಯ ನಿರ್ಬಂಧವಿಲ್ಲದೇ ನಡೆಸಬಹುದು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.