ಆರೋಗ್ಯಭರಿತ ಆಹಾರಕ್ಕಾಗಿ ಕೆಲವು ಆಹಾರಗಳು
ಹೃದಯದ ನಮ್ಮ ದೇಹದಾದ್ಯಂತ ಆಮ್ಲಜನಕ ಮತ್ತು ರಕ್ತವನ್ನು ಪೂರೈಸುತ್ತದೆ. ಅದಕ್ಕಾಗಿಯೇ ಆರೋಗ್ಯಕರ ಹೃದಯವನ್ನು ಹೊಂದಿರುವುದು ಬಹಳ ಮುಖ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ನಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗದಂತಾಗಿದೆ. ದೇಹವನ್ನು ಫಿಟ್ ಆಗಿಡಲು, ನಾವು ನಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುವುದು, ಬೆಳಿಗ್ಗೆ ವಾಕ್ ಮಾಡಲು ಹೋಗುವುದು, ಜೊತೆಗೆ ಒಳ್ಳೆಯ ಡಯಟ್ ನಿಂದ ಹಲವು ರೀತಿಯ ರೋಗಗಳನ್ನು ತಪ್ಪಿಸಬಹುದು. ಆಹಾರದ ಬಗ್ಗೆ ಕಾಳಜಿ ವಹಿಸುವುದರಿಂದ ಹೃದಯದ ಕಾಯಿಲೆಗಳನ್ನು ತಪ್ಪಿಸಬಹುದು. ಅಂತಹ ಕೆಲವು ಆಹಾರಗಳು ಹೀಗಿವೆ
ಹಣ್ಣುಗಳು
ಹಣ್ಣುಗಳ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹೃದಯವನ್ನು ಫಿಟ್ ಆಗಿರಿಸುವುದರ ಜೊತೆಗೆ ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳನ್ನು ಬಳಸಬಹುದು. ಉದಾಹರಣೆಗೆ ಸೇಬು, ದಾಳಿಂಬೆ, ಬೆರ್ರಿ, ಕಿತ್ತಳೆ, ದ್ರಾಕ್ಷಿ ಇತ್ಯಾದಿ.
ಒಣ ಹಣ್ಣುಗಳು
ಒಣ ಹಣ್ಣುಗಳು ಆರೋಗ್ಯ, ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಒಣ ಹಣ್ಣುಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ನಮ್ಮ ಹೃದಯವನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದರೊಂದಿಗೆ, ಒಮೆಗಾ -3 ಕೊಬ್ಬಿನಾಮ್ಲಗಳು ಸಹ ಹೇರಳವಾಗಿ ಕಂಡುಬರುತ್ತವೆ. ಇದು ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ.
ಧಾನ್ಯ
ಧಾನ್ಯಗಳನ್ನು ಹೃದಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಧಾನ್ಯಗಳಲ್ಲಿ ಕಬ್ಬಿಣ, ನಾರಿನಂಶ, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.
ಮೀನು
ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ದೂರವಿಡಲು ಮೀನು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಅದಕ್ಕಾಗಿಯೇ ಮೀನುಗಳನ್ನು ಸೇವಿಸಬೇಕು. ಒಮೆಗಾ -3 ಮೀನುಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಮೊಸರು
ಮೊಸರು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಮೊಸರನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದೊತ್ತಡದ ಮಟ್ಟವು ನಿಯಂತ್ರಣದಲ್ಲಿರುತ್ತದೆ.ಇದು ಹೃದಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಹಸಿ ಬೆಳ್ಳುಳ್ಳಿ ಅಥವಾ ಹೆಚ್ಚು ಬೆಳ್ಳುಳ್ಳಿ ಸೇವಿಸುವುದರ ದುಷ್ಪರಿಣಾಮಗಳು#Saakshatv #garlic https://t.co/mIxleAvTJY
— Saaksha TV (@SaakshaTv) September 7, 2021
ಅವಲಕ್ಕಿ ಲಡ್ಡು https://t.co/gV54PKVHOw
— Saaksha TV (@SaakshaTv) September 7, 2021
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಗಿಡಮೂಲಿಕೆಗಳು/ಮಸಾಲೆಗಳು https://t.co/7L3i9zpXQY
— Saaksha TV (@SaakshaTv) September 6, 2021
ರೈಲ್ವೆ ಪ್ರಯಾಣಿಕರಿಗೆ ಇನ್ನು ಈ ವಿಶೇಷ ಸೌಲಭ್ಯ ಪಡೆಯಲು ಸಾಧ್ಯವಿಲ್ಲ https://t.co/0qqT2kqApa
— Saaksha TV (@SaakshaTv) September 6, 2021