ಅಪರೂಪದ ಗುಲಾಬಿ ಬಣ್ಣದ ಚಿರತೆ ಪ್ರತ್ಯಕ್ಷ…..

1 min read

ಅಪರೂಪದ ಗುಲಾಬಿ ಬಣ್ಣದ ಚಿರತೆ ಪ್ರತ್ಯಕ್ಷ…..

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಪರೂಪದ ‘ಗುಲಾಬಿ’ ಚಿರತೆ ಇತ್ತೀಚೆಗೆ ರಾಜಸ್ಥಾನದ ಅರಾವಳಿ ಬೆಟ್ಟಗಳ ರಣಕ್‌ಪುರ  ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಈ ಹಿಂದೆ 2012 ಮತ್ತು 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗುಲಾಬಿ ಚಿರತೆ ಕಾಣಿಸಿಕೊಂಡಿತ್ತು.  ವಿಭಿನ್ನ ಬಣ್ಣವು ಬಹುಶಃ ರೂಪಾಂತರದ ಕಾರಣದಿಂದಾಗಿರಬಹುದು ಎಂದು ತಜ್ಞರು ನಂಬುತ್ತಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಫತೇಹ್ ಸಿಂಗ್ ಮಾತನಾಡಿ, ಗುಲಾಬಿ ಬಣ್ಣದ ಚಿರತೆ ರಣಕ್‌ಪುರ ಪ್ರದೇಶದಲ್ಲಿ ಮತ್ತು ರಾಜ್‌ಸಮಂದ್ ಜಿಲ್ಲೆಯ ಕುಂಭಲ್‌ಗಢ ಪ್ರದೇಶದಲ್ಲಿ ಸ್ಥಳೀಯರಿಗೆ ಗೋಚರಿಸುತ್ತಿದೆ. “ಚರ್ಮದ ರೂಪಾಂತರದಿಂದಾಗಿ ಬಣ್ಣವು ತೋರುತ್ತದೆ” ಎಂದು ಅವರು ಹೇಳಿದರು.

ರಣಕ್‌ಪುರ ಮತ್ತು ಕುಂಭಲ್‌ಗಢ್‌ನ ಅರಣ್ಯ ಪ್ರದೇಶದಲ್ಲಿ  ಸ್ಥಳೀಯರು ಸ್ಟ್ರಾಬೆರಿ ಬಣ್ಣದ ಕೋಟ್ ಹೊಂದಿರುವ ಚಿರತೆನ್ನ  ಗಮನಿಸಿದ್ದಾರೆ. ಆದರೆ, ಎರಡೂ ಸ್ಥಳಗಳಲ್ಲಿ ಒಂದೇ ಚಿರತೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಶಾಲವಾದ ಅರಣ್ಯ ಪ್ರದೇಶದಿಂದಾಗಿ ಹಲವು ಕಡೆಗಳಲ್ಲಿ  ಗುಲಾಬಿ ಬಣ್ಣದ  ಚಿರತೆ ಕಾಣಿಸಿಕೊಂಡಿದೆ ಎಂದು ರಾಜ್‌ಸಮಂದ್ ಡಿಸಿಎಫ್ ಫತೇ ಸಿಂಗ್ ರಾಥೋರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಹೆಣ್ಣು ಚಿರತೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಅವಕಾಶ ಛಾಯಾಗ್ರಾಹಕರಿಗೆ ಸಿಕ್ಕಿದೆ.. ಕುಂಭಲ್ಗಢ ಅರಣ್ಯವು 600 ಚದರ ಕಿ.ಮೀ.ಗೂ ಹೆಚ್ಚು ಭೂ ಪ್ರದೇಶವನ್ನ ವ್ಯಾಪಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd