ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ – ಟಾಪ್ 5 ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ….?
ನವದೆಹಲಿ : ಫೋರ್ಬ್ಸ್ ಬಿಲಿಯನೇರ್ಸ್ 35 ನೇ ವಾರ್ಷಿಕ ಪಟ್ಟಿ ಬಡಿಗಡೆಯಾಗಿದ್ದು, ಭಾರತಕ್ಕೆ 3ನೇ ಸ್ಥಾನ ಸಿಕ್ಕಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾ ಹಾಗೂ 2ನೇ ಸ್ಥಾನದಲ್ಲಿ ಚೀನಾ ಇದೆ. ನಂತರದಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಬಿಲಿಯನೇರ್ಸ್ ಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನೂ ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ವಿಶ್ವದ 10 ನೇ ಶ್ರೀಮಂತರಾಗಿ ಗುರುತಿಸಿಕೊಂಡಿದ್ದಾರೆ. ಇವರಾದ ನಂತರ 4ನೇ ಸ್ಥಾನದಲ್ಲಿ ಭಾರತದ ಉದ್ಯಮಿ ಅದಾನಿ ಇದ್ದಾರೆ.
ಇನ್ನೂ ಮೊದಲನೇ ಸ್ಥಾನದಲ್ಲಿ ಅಮೆಜಾನ್ CEO ಮತ್ತು ಸ್ಥಾಪಕ ಜೆಫ್ ಬೆಜೋಸ್ 4ನೇ ವರ್ಷವೂ ಕೂಡ 1ನೇ ಸ್ಥಾನವ್ನ ಖಾಯಂ ಆಗಿಸಿಕೊಂಡಿದ್ದಾರೆ. 2ನೇ ಸ್ಥಾನವನ್ನ ಟೆಸ್ಲಾ CEO ಎಲಾನ್ ಮಸ್ಕ್ ಪಡೆದಿದ್ದಾರೆ.