ನವದೆಹಲಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಹಳೇ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಕಾವೇರಿಯೇ ಆಧಾರ. ಕುಡಿಯುವ ನೀರು ಕೊಡುವ ಭರವಸೆಯ ಮೇಲೆ ಜನರು ಎನ್ ಡಿಎಗೆ ವೋಟ್ ಮಾಡಿದ್ದಾರೆ. ನಾನು ಯಾರನ್ನೂ ದೂಷಿಸುವುದಿಲ್ಲ. ಕುಡಿಯುವ ನೀರಿನ (Bengaluru Drinking Water) ಸಮಸ್ಯೆ ಬಗೆಹರಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಮನವಿ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ (Rajyasabha) ಮಾತನಾಡಿದ ಅವರು, ಬೆಂಗಳೂರು ಬೆಳೆಯುತ್ತಿರುವ ನಗರ ಅದಕ್ಕೆ ಕುಡಿಯುವ ನೀರಿನ ಅಗತ್ಯವಿದೆ. ಕುಡಿಯುವ ನೀರಿಲ್ಲದೇ (Drinking Water) ಸಂಕಷ್ಟದಲ್ಲಿದ್ದಾರೆ, ನೀರಿಲ್ಲದೇ ತತ್ತರಿದ್ದ ಸಂದರ್ಭದಲ್ಲಿ ಒಂದು ಟಿಎಂಸಿ ನೀರು ಹರಿಸಲು CWRC (ಕಾವೇರಿ ನೀರು ನಿಯಂತ್ರಣ ಸಮಿತಿ) ಹೇಳಿತ್ತು. ಮಳೆಯಿಂದ ಈಗ ಎಲ್ಲವೂ ಸುಗಮವಾಗಿದೆ. ಆದರೆ, ಮಳೆ ಬರದಿದ್ದರೆ ಮಳೆ ಬರದಿದ್ದರೇ ನಮ್ಮ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಸಾಕಷ್ಟು ನೀರಿನ ವ್ಯಾಜ್ಯ ಬಗೆಹರಿಸಿದ್ದೇನೆ. ಮುಂದಿನ ಬಜೆಟ್ ಬಗ್ಗೆ ಮಾತನಾಡಲು ಇರ್ತಿನೊ ಇಲ್ವೊ ಗೊತ್ತಿಲ್ಲ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಜನರು ಎನ್‌ಡಿಎ ಬೆಂಬಲಿಸಿದ್ದಾರೆ. ಹಳೇ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಕಾವೇರಿಯೇ ಆಧಾರ, ಕುಡಿಯುವ ನೀರು ಕೊಡುವ ಭರವಸೆ ಮೇಲೆ ಜನರು ಎನ್‌ಡಿಎಗೆ ಮತ ಹಾಕಿದ್ದಾರೆ. ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ನಾನು ಯಾರನ್ನೂ ದೂಷಿಸುವುದಿಲ್ಲ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬದ್ಧತೆ ಇರುವ ವ್ಯಕ್ತಿಯನ್ನು ಕೃಷಿಗೆ ಸಚಿವರನ್ನಾಗಿ ಮಾಡಿದ್ದಾರೆ. ಉತ್ತಮ ಅನುಭವ ಇರುವ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹತ್ತು ವರ್ಷ ಸಿಎಂ ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರು ಕರ್ನಾಟಕದಲ್ಲಿ ಎರಡು ಸೀಟು ಮಾತ್ರ ಗೆದ್ದಿದ್ದರೂ ನಮಗೆ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ ಎಂದು ಹೊಗಳಿದ್ದಾರೆ.








