ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನ

1 min read

ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನ

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಮಾಜಿ ಕುಳ್ಳ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದ ಎಲಿಫ್ ಕೊಕಾಮನ್  ಎಂಬ ಮಹಿಳೆ  33 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಟರ್ಕಿ ದೇಶದ  ಒಸ್ಮಾನಿಯ ಪ್ರಾಂತ್ಯದ ಕದಿರ್ಲಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಎಲಿಫ್ ಕೊಕಾಮನ್, ವಿಶ್ವದ ಅತ್ಯಂತ ಕುಳ್ಳಗಿರುವ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆ ಒಂದು ವರ್ಷದ ವರೆಗೆ ಇವರ ಪಾಲಾಗಿತ್ತು.

ನ್ಯುಮೋನಿಯಾ ಕಾಯಿಲೆಯಿಂದ ಬಳಲಿತ್ತಿದ್ದ ಎಲಿಫ್ ಕೊಕಾಮನ್ ಅವರನ್ನ ಮಂಗಳವಾರ ಅವರನ್ನು ICU ಗೆ ಕರೆದೊಯ್ಯಲಾಯಿತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕುಬ್ಜ ದೇಹವನ್ನ ಹೊಂದಿದ್ದ ಕೊಕಾಮನ್ 2010ರಲ್ಲಿ ಕೇವಲ 72.6 ಸೆಂಟಿಮೀಟರ್‌ಗಳ (2’5″) ಕಡಿಮೆ ಎತ್ತರಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದರು.

“ಮುಂದೊಂದು ದಿನ ಜಗತ್ತು ನನ್ನನ್ನು ಗುರುತಿಸುತ್ತದೆ ಎಂದು ನಾನು ಯಾವಾಗಲೂ ಆಶಿಸುತ್ತೇನೆ. ನಾನು ಚಿಕ್ಕವಳಾಗಿದ್ದಾ ನನ್ನ ಜೀವನ ಕಷ್ಟಕರವಾಗಿತ್ತು. ಏಕೆಂದರೆ ನನ್ನ ಸಹಪಾಠಿಗಳೆಲ್ಲರೂ ನನ್ನನ್ನು ಚಿಕ್ಕವನೆಂದು ಕೀಟಲೆ ಮಾಡುತ್ತಿದ್ದರು. ಎಮದು ಗಿನ್ನಿಸ್ ರೆಕಾರ್ಡ್ ಪಡೆಯುವಾಗ ಹೇಳಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd