ಕೊರೊನಾ ಆತಂಕ : ಕೋಲಾರದ Kolar ಕಾಮಾಂಡಹಳ್ಳಿಯಲ್ಲಿ ನಾಲ್ಕು ಸಾವು
ಕೋಲಾರ : ಕೋಲಾರದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಜನ ಆತಂಕದಲ್ಲಿದ್ದಾರೆ.
ಈ ಮಧ್ಯೆ ಜಿಲ್ಲೆಯ ಕಾಮಾಂಡಹಳ್ಳಿ ಗ್ರಾಮದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಇದರಲ್ಲಿ ಮೂರು ಜನ ಕೊರೊನಾ ಸೋಂಕಿನಿಂದ ಮೃತಪಟ್ಟರೆ, ಒಂದು ಅಸಹಜ ಸಾವಾಗಿದೆ.
ಈ ಸರಣಿ ಸಾವುಗಳಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಮಧ್ಯೆ ಗ್ರಾಮಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದು, ಸದ್ಯ ಗ್ರಾಮದಲ್ಲಿ 12 ಕೊರೊನಾ ಸೋಂಕು ಪ್ರಕರಣಗಳಿವೆ.
ಇತ್ತ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆಸಿದೆ.