ನವದೆಹಲಿ: ನಿರ್ಮಾಣ ಹಂತದ ಸುರಂಗ ಕುಸಿದ ಪರಿಣಾಮ ಅದರಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಇನ್ನೂ ನಾಲ್ಕೈದು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರಖಂಡದಲ್ಲಿ (Uttarakhand) ನಿರ್ಮಾಣ ಹಂತದ ಸುರಂಗ (Tunnel) ಕುಸಿದಿತ್ತು. ಈ ವೇಳೆ 41 ಕಾರ್ಮಿಕರು ಸಿಲುಕಿದ್ದರು. ಅವರ ರಕ್ಷಣೆಗೆ ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅವರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕಾಗಬಹುದು ಎನ್ನಲಾಗುತ್ತಿದೆ.
ಸದ್ಯ ದೀರ್ಘಾವಧಿಯಿಂದ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಕ್ರಮ ಕೈಗೊಳ್ಳುವುದಕ್ಕಾಗಿ ವಿಟಮಿನ್ ಮಾತ್ರೆ, ಖಿನ್ನತೆ ನಿವಾರಕ ಔಷಧಗಳು ಹಾಗೂ ಡ್ರೈ ಫ್ರೂಟ್ಸ್ ಗಳನ್ನು ಪೈಪ್ ಮೂಲಕ ಸರಬರಾಜು ಮಾಡಲಾಗುತ್ತಿದೆ.
ಅದೃಷ್ಟವಶಾತ್ ಸುರಂಗದ ಒಳಗೆ ವಿದ್ಯುತ್ ಇದೆ. ಕುಡಿಯಲು ನೀರು ಕೂಡ ಇವೆ ಎನ್ನಲಾಗಿದ್ದು, ಅವರ ರಕ್ಷಣೆಗಾಗಿ ಲಂಬವಾಗಿ ರಂದ್ರ ಕೊರೆಯಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡರುವ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.