ದೇಶದ ಬಡ ಕುಟುಂಬಗಳಿಗೆ ಅಡುಗೆ ಅನಿಲ (LPG) ಸಂಪರ್ಕವನ್ನು ವಿತರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಣಕಾಸು ವರ್ಷದಲ್ಲಿ 10 ಮಿಲಿಯನ್ (1 ಕೋಟಿ) LPG ಸಂಪರ್ಕಗಳನ್ನು ಉಚಿತ ರೀಫಿಲ್ ಮತ್ತು ಒಲೆಯೊಂದಿಗೆ ವಿತರಿಸಲಾಗುವುದು.
ಯೋಜನೆಯ ಲಾಭ ಪಡೆಯುವ ವಿಧಾನ
ಉಜ್ವಲ್ ಯೋಜನೆಯ ಲಾಭ ಪಡೆಯಲು, ಅರ್ಜಿದಾರರು ಈ ದಾಖಲೆಗಳನ್ನು ಹೊಂದಿರಬೇಕು:
✔ ಪಾಸ್‌ಪೋರ್ಟ್ ಸೈಜ್ ಫೋಟೋ
✔ ಪಡಿತರ ಚೀಟಿ (BPL ಕುಟುಂಬದ ದೃಢೀಕರಣಕ್ಕಾಗಿ)
✔ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
✔ ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್
ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ (Grama One) ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಉಜ್ವಲ್ ಯೋಜನೆಯ ಉದ್ದೇಶ
ಈ ಯೋಜನೆಯ ಮೂಲಕ ಬಡವರಿಗೆ ಅಗ್ಗದ ದರದಲ್ಲಿ ಅಡುಗೆ ಅನಿಲವನ್ನು ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಯೋಜನೆಯಿಂದ ದೇಶದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ.
ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LPG ವಿತರಕರನ್ನು ಸಂಪರ್ಕಿಸಬಹುದು.






