ಭಾರತ – ಯುಎಇ ನಡುವಿನ ಮುಕ್ತ ವ್ಯಾಪಾರ ಮೇ 1 ರಿಂದ ಜಾರಿ ಸಾಧ್ಯತೆ
ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಈ ವರ್ಷ ಮೇ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಭಾರತ-ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ, CEPA ಗೆ 18 ಫೆಬ್ರವರಿ 2022 ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನಡುವೆ ನಡೆದ ಭಾರತ-ಯುಎಇ ವರ್ಚುವಲ್ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.
ಈ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸರಕು ವ್ಯಾಪಾರವನ್ನು 100 ಬಿಲಿಯನ್ ಯುಎಸ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಭಾರತ-ಯುಎಇ ಸಿಇಪಿಎ ಕಳೆದ ದಶಕದಲ್ಲಿ ಯಾವುದೇ ದೇಶದೊಂದಿಗೆ ಭಾರತವು ಸಹಿ ಮಾಡಿದ ಮೊದಲ ಆಳವಾದ ಮತ್ತು ಸಂಪೂರ್ಣ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.
ಐತಿಹಾಸಿಕ ಭಾರತ – ಯುಎಇ ಸಿಇಪಿಎ, ನಮ್ಮ ಜನರ ಜೀವನವನ್ನು ಪರಿವರ್ತಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಪಾಲುದಾರಿಕೆಯನ್ನು ಬಲಪಡಿಸಲು ಜಂಟಿ ಮಾರ್ಗಸೂಚಿಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Free trade agreement between India-UAE is expected to come into force from 1st May