ಫ್ರೆಂಚ್ ಓಪನ್ 2021- ಫ್ರೀ ಕ್ವಾರ್ಟರ್ ಫೈನಲ್ಗೇರಿದ ಜಾಕೊವಿಕ್, ರಫೆಲ್ ನಡಾಲ್
ಸ್ಪೇನ್ ಗೂಳಿ ರಫೆಲ್ ನಡಾಲ್ ಅವರ ಗೆಲುವಿನ ಓಟ ಮುಂದುವರಿದಿದೆ. ಮೂರನೇ ಸುತ್ತಿನಲ್ಲಿ ಸುಲಭ ಜಯ ಸಾಧಿಸಿರುವ ರಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ 16ನೇ ಬಾರಿ ಫ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ 13 ಬಾರಿ ಫ್ರೆಂಚ್ ಓಪನ್ ಪ್ರಸಸ್ತಿ ಗೆದ್ದುಕೊಂಡಿದ್ದು, ಇದೀಗ ದಾಖಲೆಯ 14ನೇ ಪ್ರಶಸ್ತಿಯತ್ತ ಚಿತ್ತವನ್ನಿಟ್ಟಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು 6-3, 6-3, 6-3ರಿಂದ ಬ್ರಿಟನ್ ನ ಕ್ಯಾಮೆರನ್ ನೊರೀಯ್ ಅವರನ್ನು ಸೋಲಿಸಿದ್ರು. ಈ ಮೂಲಕ ನಡಾಲ್ ಅವರು ಸತತ 30 ಸೆಟ್ ಗಳನ್ನು ಗೆದ್ದ ಗೌರವಕ್ಕೂ ಪಾತ್ರರಾಗಿದ್ದರು. 2019ರ ಫೈನಲ್ ನಲ್ಲಿ ನಡಾಲ್ ಅವರು ಫೈನಲ್ ನಲ್ಲಿ ಡಾಮಿನಿಕ್ ಥಿಮ್ ವಿರುದ್ಧ ಸೆಟ್ ಕಳೆದುಕೊಂಡಿದ್ದರು.
ಫ್ರಿ ಕ್ವಾರ್ಟರ್ ನಲ್ಲಿ ರಫೆಲ್ ನಡಾಲ್ ಅವರು ಇಟಲಿಯ ಜಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಕೂಡ ಕೂಡ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ನುವಾನ್ ಜಾಕೊವಿಕ್ ಅವರು 6-1, 6-4, 6-1ರಿಂದ ಲೂಥಿಯಾನಾದ ರಿಕಾರ್ಡಸ್ ಬೆರಾಂಕಿಸ್ ಅವರನ್ನು ಪರಾಭವಗೊಳಿಸಿದ್ರು. ಫ್ರಿ ಕ್ವಾರ್ಟರ್ ಫೈನಲ್ ನಲ್ಲಿ ಲಾರೆಂಜ್ ಮ್ಯೂಸೆಟ್ ಅವರನ್ನು ಎದುರಿಸಲಿದ್ದಾರೆ. ಜಾಕೊವಿಕ್ ಅವರು ಫ್ರೆಂಚ್ ಓಪನ್ ನಲ್ಲಿ 12ನೇ ಬಾರಿ ಫ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಿರುವುದು. ಲಾರೆಂಜ್ ಅವರು 3-6, 6-4, 6-3, 6-3, 3-6, 6-3ರಿಂದ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು ಮಣಿಸಿದ್ರು.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ಇಟಲಿಯ ಜಾನಿಕ್ ಸಿನ್ನೆರ್ ಅವರು 6-1, 4-6, 6-7, 7-5, 6-4ರಿಂದ ಫ್ರಾನ್ಸ್ ನ ಪಿರ್ ಹ್ಯೂಗಸ್ ಹೆಬಾರ್ಟ್ ಅವರನ್ನು ಸೋಲಿಸಿದ್ರು.