ನವದೆಹಲಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆಶಿಶ್ (22) ಹತ್ಯೆಯಾದ ಯುವಕ. ವಿಕಾಸ್ ಹಾಗೂ ವಂಶು ಎಂಬ ಯುವಕರು ಕೊಲೆ ಮಾಡಿದ್ದಾರೆ. ಆಶಿಶ್ ಹಾಗೂ ಕೊಲೆ ಮಾಡಿದವರು ದೀರ್ಘ ಕಾಲದ ದ್ವೇಷ ಹೊಂದಿದ್ದರು ಎನ್ನಲಾಗಿದೆ. ಇತ್ತೀಚೆಗೆ ಆಶಿಶ್ ಮನೆಗೆ ಹೋಗಿ ದ್ವೇಷ ಮರೆತು ಒಂದಾಗೋಣ ಎಂದು ಹೇಳಿದ್ದಾರೆ. ಅಲ್ಲದೇ ಬಾರ್ ಗೆ ಹೋಗೋಣ ಬಿಲ್ ನಾವೇ ಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎದು ಆಶಿಶ್ ತಂದೆ ಆರೋಪಿಸಿದ್ದಾರೆ.
ಮತ್ತೆ ಒಂದಾಗಿರುವುದು ಆಶಿಶ್ ತಂದೆಯ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರು ಅಂದು ಬಾರ್ ಗೆ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮೂವರೂ ಸೇರಿಕೊಂಡು ಹೋದ ನಂತರ ವಿಕಾಸ್ ಎಂಬಾತ ಆಶಿಶ್ ಜೊತೆ ಜಗಳ ಮಾಡಿದ್ದಾನೆ. ಇವರಿಬ್ಬರ ಜಗಳಕ್ಕೆ ವಂಶು ಕೂಡಾ ಸೇರಿಕೊಂಡಿದ್ದಾನೆ. ಆಗ ಇದ್ದಕ್ಕಿದ್ದಂತೆ ಆಶಿಶ್‌ಗೆ ಚಾಕುವಿನಿಂದ (Knife) ಇರಿದಿದ್ದಾರೆ.
ಚಾಕುವಿನಿಂದ ಇರಿದ ಬಳಿಕ ವಿಕಾಸ್ ಮತ್ತು ವಂಶು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋದಲ್ಲಿ ವಿಕಾಸ್ ಹಾಗೂ ವಂಶು ಆಶಿಶ್‌ನ ಬೆನ್ನಿಗೆ ಹಲವು ಬಾರಿ ಇರಿದಿದ್ದು, ನಂತರ ರಸ್ತೆಯಲ್ಲಿ ಆತನನ್ನು ಥಳಿಸಿರುವುದು ಸೆರೆಯಾಗಿದೆ. ಘಟನೆಯಿಂದ ಭೀಕರ ಗಾಯಗೊಂಡಿದ್ದ ಆಶಿಶ್‌ನನ್ನು ಆತನ ತಂದೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.








