ರಾಜ್ಯದಲ್ಲಿ ಕರ್ನಾಟಕ ಇಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ (KERC) ವಿದ್ಯುತ್ ದರವನ್ನು ಹೆಚ್ಚಿಸಿರುವುದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬೆಲೆ ಏರಿಕೆಯಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೂ ತೀವ್ರ ಬಿಸಿ ತಟ್ಟಲಿದೆ.
200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಮೊದಲಿಗಿಂತ ಹೆಚ್ಚುವರಿ ಬಿಲ್ ಬರಲಿದೆ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸಬೇಕಾಗುತ್ತಿದೆ. ದೈನಂದಿನ ವಿದ್ಯುತ್ ಬಳಕೆ ಜಾಸ್ತಿಯಿರುವವರ ಮೇಲೆ ಈ ಹೊಸ ದರ ಏರಿಕೆ ಮತ್ತಷ್ಟು ಭಾರವಾಗಲಿದೆ.
ಸಚಿವ ಶರಣಪ್ರಕಾಶ್ ಪಾಟೀಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ದರವನ್ನು ಏರಿಸುವುದು ಎಷ್ಟು ನ್ಯಾಯಸಮ್ಮತ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಇದೇ ರೀತಿ ಬೆಲೆ ಏರಿಕೆ ಮುಂದುವರೆದರೆ ಸಾಮಾನ್ಯ ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ ಬೀಳಲಿದೆ. ಜನಸಾಮಾನ್ಯರ ಬೇಡಿಕೆಗಳನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳುತ್ತದಾ? ಇಲ್ಲವೇ ಈ ಹೊಸ ದರ ಮುಂದುವರಿಯುತ್ತದಾ? ಎಂಬುದನ್ನು ಕಾದು ನೋಡಬೇಕು.