ಬೆಂಗಳೂರಿನಲ್ಲಿ ಎಮ್‌ಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ | ಗೇಮ್‌ಪ್ಲೇ ಘೋಷಣೆ

1 min read
M.S. Dhoni saaksha tv

ಬೆಂಗಳೂರು, ಅಕ್ಟೋಬರ್ 12, 2021: ಬೆಂಗಳೂರಿನಲ್ಲಿರುವ ಉದಯೋನ್ಮುಖ ಕ್ರಿಕೆಟ್ ಆಟಗಾರರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಗೇಮ್‌ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್, ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ (MSDCA)ಯನ್ನು ಬೆಂಗಳೂರಿನಲ್ಲಿ ಆರಂಭವಾಗಿದೆ ಎಂದು ಪ್ರಕಟಿಸಿದರು.

ಅತ್ಯಾಧುನಿಕ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರಿನ ಎಂ ಎಸ್ ಡಿ ಸಿ ಎ (MSDCA) ಯಲ್ಲಿ ತರಬೇತಿ ಪಡೆಯುವವರಿಗೆ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಶ್ರೀ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶನ
ನೀಡಲಿದ್ದಾರೆ.

ಎಂಎಸ್‌ಡಿಸಿಎ ಮಾರ್ಗದರ್ಶಕರಾದ ಶ್ರೀ ಎಂ.ಎಸ್. ಧೋನಿ ಪ್ರತಿಕ್ರಿಯಿಸಿ, “ಎಂಎಸ್ ಧೋನಿ ಅಕಾಡೆಮಿ ಪ್ರಾರಂಭಿಸಲು ತುಂಬಾ ಉತ್ಸುಕನಾಗಿದ್ದೇನೆ.

ಧೋನಿ ಕ್ರಿಕೆಟ್ ಅಕಾಡೆಮಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಉತ್ತಮ ತಂತ್ರಗಳು ಮತ್ತು ತಂತ್ರಜ್ಞಾನದ ಸಹಾಯದಿಂದ 360 ಡಿಗ್ರಿ ತರಬೇತಿ ವಿಧಾನವನ್ನು ಒದಗಿಸುವುದು ಅಕಾಡೆಮಿಯ ಗುರಿಯಾಗಿದೆ.

ನಾವು ಅರ್ಹ ತರಬೇತುದಾರರು ಮತ್ತು ಫಿಟ್ನೆಸ್ ತಜ್ಞರನ್ನು ಕರೆತರುತ್ತೇವೆ. ಈಗಲೇ ನೋಂದಾಯಿಸಿ ಮತ್ತು ನನ್ನ ಅಕಾಡೆಮಿಯ ಭಾಗವಾಗಲು ಸಿದ್ಧರಾಗಿ. ಇದು ಕೇವಲ ಕ್ರಿಕೆಟರ್ ಆಗಲು ಅಷ್ಟೇ ಅಲ್ಲ; ಇದು ಚತುರತೆಯುಳ್ಳವರಾಗಲು ಕೂಡಾ. ಆಟದ ಮಾನಸಿಕ ಮತ್ತು ದೈಹಿಕ ಕೌಶಲ್ಯಗಳನ್ನು ಕಲಿಯಲು ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಬನ್ನಿ.” ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವವರರಿಗೆ ಶ್ರೀ ಎಂ.ಎಸ್. ಧೋನಿ ಪ್ರಕ್ರಿಯೆಯ ಮೇಲೆ ಗಮನ ಕೊಡಿ ಎಂಬ ಸಲಹೆ ನೀಡಿದ್ದಾರೆ.

“ನನ್ನ ಒಂದೇ ಒಂದು ಸಲಹೆ ಎಂದರೆ, ಫಲಿತಾಂಶಕ್ಕಿಂತ ಹೆಚ್ಚು ಪ್ರಕ್ರಿಯೆ ಮುಖ್ಯವಾದುದು. ಫಲಿತಾಂಶವು ನಮ್ಮ ಪ್ರಕ್ರಿಯೆಯ ಫಲ ಅಷ್ಟೇ. ಆದರೆ, ಇಂದಿನ ಜಗತ್ತಿನಲ್ಲಿ ನಾವು ಪ್ರಕ್ರಿಯೆಗಿಂತ ಹೆಚ್ಚಾಗಿ ಫಲಿತಾಂಶದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ.

ಆದ್ದರಿಂದ, ಪ್ರಕ್ರಿಯೆಯ ಮೇಲೆ ಗಮನ ಕೊಡಿ, ಎಲ್ಲಾ ಸಣ್ಣ ವಿಷಯಗಳನ್ನು ನೋಡಿಕೊಳ್ಳಿ ಮತ್ತು ಇದರಿಂದ ಅಂತಿಮವಾಗಿ ನೀವು ಬಯಸಿದ ಫಲಿತಾಂಶವನ್ನು
ಪಡೆಯುತ್ತೀರಿ.

ನಾವು ಇನ್ನೂ ಹೆಚ್ಚಿನದನ್ನು ಪಡೆಯಬೇಕಾಗಿತ್ತು ಎಂದು ದೂರುತ್ತಲೇ ಇರುತ್ತೇವೆ. ಆದರೆ ವಾಸ್ತವವಾಗಿ, ನಾವು ಏನು ಮಾಡಿದ್ದೇವೆ ಎಂಬುದರ ಫಲವೇ ನಮಗೆ ಸಿಗುವ ಫಲಿತಾಂಶವಾಗಿರುತ್ತದೆ.

ಆದ್ದರಿಂದ, ನಾವು ಚೆನ್ನಾಗಿ ತಯಾರಾದರೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಹಾಗೂ ನಾವು ನಮಗೇ ಪ್ರಾಮಾಣಿಕರಾಗಿದ್ದರೆ, ನಾವು ಬಯಸಿದ ಫಲಿತಾಂಶವನ್ನು ಪಡೆಯುತ್ತೇವೆ.

M.S. Dhoni saaksha tv

ಒಂದು ವೇಳೆ ಅಲ್ಲಿ ಯಾವುದೇ ನ್ಯೂನತೆಯಿದ್ದರೆ, ಅದು ನಮ್ಮ ಮುಂದಿನ ಕಲಿಕೆಯಾಗಿರುತ್ತದೆ. ಆಲ್ ದಿ ಬೆಸ್ಟ್” ಎಂದು ಶ್ರೀಎಂ.ಎಸ್. ಧೋನಿ ಹೇಳಿದರು.

ಗೇಮ್‌ಪ್ಲೇ ಮಾಲೀಕರಾದ ಶ್ರೀ ದೀಪಕ್ ಎಸ್. ಭಟ್ನಾಗರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಗೇಮ್‌ಪ್ಲೇ ಗೆ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಎಲ್ಲಾ ಕ್ರಿಕೆಟಿಗರಿಗೂ ಇಂದು ಮಹತ್ವದ ದಿನವಾಗಿದೆ.

ಬೆಂಗಳೂರಿನಲ್ಲಿ ಆರಂಭಗೊಂಡ ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ, ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಲು ಬಯಸುವ ಮಕ್ಕಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯುತ್ತಮ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳನ್ನು ಹೊಂದಿದೆ,” ಎಂದು ಹೇಳಿದರು.

ಸ್ವತಃ ಶ್ರೀ ಮಹೇಂದ್ರ ಸಿಂಗ್ ಧೋನಿ ಅಕಾಡೆಮಿಯ ಮಾರ್ಗದರ್ಶಕರಾಗಿರುವುದರಿಂದ, ಬೆಂಗಳೂರಿನ ಎಲ್ಲಾ ಯುವಜನರಿಗೆ ಕ್ರಿಕೆಟ್ ಮಾಂತ್ರಿಕನಿಂದ ಕಲಿಯಲು ಸಾಧ್ಯ ಜೊತೆಗೆ ಮೀಸಲಾದ ಅರ್ಹ ತರಬೇತುದಾರರ ತಂಡದಿAದಲೂ ಕೂಡ ಕಲಿಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ನಾವು ಎಂ ಎಸ್ ಡಿ ಸಿ ಎ ಬೆಂಗಳೂರು ಆರಂಭಿಸುವುದರ ಮೂಲಕ ಭಾರತೀಯ ಕ್ರಿಕೆಟ್ ಬೆಳೆಯಲು ಕೊಡುಗೆ ನೀಡಲು ಬಯಸುತ್ತೇವೆ ಎಂದು ಶ್ರೀ ದೀಪಕ್ ಎಸ್. ಭಟ್ನಾಗರ್ ಹೇಳಿದರು.
ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ ಬೆಂಗಳೂರು, ಇದರ ಸಂಯೋಜಕರಾಗಿರುವ ಶ್ರೀ ಎಂ. ವಿಶ್ವನಾಥ್ ಮಾತನಾಡಿ, “ಬೆಂಗಳೂರಿನಲ್ಲಿ ಯುವ ಕ್ರಿಕೆಟಿಗರಿಗೆ ಬಹಳ ಸಂಭ್ರಮದ ಸಮಯ ಇದು.

ಈಗ, ಶ್ರೇಷ್ಠ ಕ್ರಿಕೆಟಿಗ, ಮಹೇಂದ್ರ ಸಿಂಗ್ ಧೋನಿಯ ಮಾರ್ಗದರ್ಶನದ ಜೊತೆಗೆ ಅತ್ಯುತ್ತಮ ತರಬೇತುದಾರರಿಂದ ಕ್ರಿಕೆಟ್ ಕಲಿಯಬಹುದು. ಬೆಂಗಳೂರಿನಲ್ಲಿರುವ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಅಕಾಡೆಮಿಗೆ ಕರೆತರಲು ನಾನು ಈ ಮೂಲಕ ಆಹ್ವಾನಿಸುತ್ತೇನೆ.”

ಒಬ್ಬ ಯಶಸ್ವಿ ಕ್ರಿಕೆಟಿಗನಾಗಲು, ಆತ ಆತ್ಮವಿಶ್ವಾಸದಿಂದಿರಬೇಕು, ಒತ್ತಡದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳಬೇಕು ಎಂಬ ನಂಬಿಕೆಯೊಂದಿಗೆ ಎಂ ಎಸ್ ಡಿ ಸಿ ಎ ಕಾರ್ಯನಿರ್ವಹಿಸುತ್ತದೆ. ಕ್ರಿಕೆಟ್ ತಂತ್ರಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆಟದ ಅರ್ಥ ಮತ್ತು ಅಂತಃಪ್ರಜ್ಞೆಯನ್ನು ಸುಧಾರಿಸಲು ಅಕಾಡೆಮಿಯ ತರಬೇತಿ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಎಂ ಎಸ್ ಡಿ ಸಿ ಎ ಯ ಗಮನ, ಕೇವಲ ನೆಟ್‌ಗಳಲ್ಲಿ ಪ್ರದರ್ಶನ ನೀಡಲು ಆಟಗಾರರಿಗೆ ಸಹಾಯ ಮಾಡುವುದಲ್ಲ, ಬದಲಿಗೆ ವಾಸ್ತವವಾಗಿ ಆಟದಲ್ಲಿ ಯಶಸ್ವಿಯಾಗಬಲ್ಲ ವ್ಯಕ್ತಿಯಾಗಿ ಅವರನ್ನು ರೂಪಿಸುವುದು. ಎಂ ಎಸ್ ಡಿ ಸಿ ಎ ಯಲ್ಲಿ ತರಬೇತಿಯು ಬಹಳಷ್ಟು ಆಟದ ಪ್ರಜ್ಞೆ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ಪಂದ್ಯದ ಸಮಯದಲ್ಲಿ ಆಡುವವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ ಹೊರತು ನೆಟ್‌ನಲ್ಲಿ ಕಲಿಸುವುದಲ್ಲ. ಎಂ ಎಸ್ ಡಿ ಸಿ ಎ ಕ್ರಿಕೆಟ್ ಕೋಚಿಂಗ್ ಪ್ರೋಗ್ರಾಂ ಗುಣಮಟ್ಟದ ಕ್ರಿಕೆಟಿಗರನ್ನು ಬೆಳೆಸುವುದನ್ನು ಉತ್ತೇಜಿಸುತ್ತದೆ ಹಾಗೂ ನಾಯಕನಾಗಿರುವ ವ್ಯಕ್ತಿ, ಬಲವಾದ ತಂಡವನ್ನು ನಡೆಸುವ ಸಾಮರ್ಥ್ಯಗಳನ್ನು ಹೊಂದಿರುತ್ತಾನೆ, ಶ್ರೇಷ್ಠತೆಗಾಗಿ ಶ್ರಮಿಸುತ್ತಾನೆ ಮತ್ತು ಕ್ರೀಡಾ ಮನೋಭಾವ ಮತ್ತು ನ್ಯಾಯಯುತ ಆಟವನ್ನು ಪ್ರದರ್ಶಿಸುತ್ತಾನೆ ಎಂದು ನಂಬಿದೆ.
ಆರ್ಕಾ ಸ್ಪೋರ್ಟ್ಸ್ನ ಕನಸಿನ ಕೂಸು, ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ. ನಮ್ಮ ದೇಶದ ಮಹತ್ವಾಕಾಂಕ್ಷಿ ಕ್ರೀಡಾ ಸಮುದಾಯಕ್ಕೆ ಶ್ರೇಷ್ಠ ಕ್ರಿಕೆಟಿಗರನ್ನು ನೀಡುವ ಏಕೈಕ ಚಿಂತನೆಯೊಂದಿಗೆ ಆರಂಭವಾಗಿದೆ. ಎಂಎಸ್ ಧೋನಿ ಮಾರ್ಗದರ್ಶನ ಮತ್ತು ಮಿಹಿರ್ ದಿವಾಕರ್ ಸ್ಥಾಪಿಸಿದ ಎಂ ಎಸ್ ಡಿ ಸಿ ಎ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ತರಬೇತಿ ಮತ್ತು ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆ. ಸುಧಾರಿತ ತಂತ್ರಜ್ಞಾನ, ಪ್ರಧಾನ ತರಬೇತಿ ಸೌಲಭ್ಯಗಳು ಮತ್ತು ಅರ್ಹ ತರಬೇತುದಾರರನ್ನು ಹೊಂದಿದ ಎಂ ಎಸ್ ಡಿ ಸಿ ಎ ಜಗತ್ತಿನ ಮೂಲೆ ಮೂಲೆಗಳಿಗೂ ತನ್ನ ಛಾಪನ್ನು ಮೂಢಿಸುವತ್ತ ಗುರಿ ಇಟ್ಟಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd