ಕ್ವಾಟರ್ಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದೆ.
ಮುಂಬೈನ ಚೆಂಬೂರ್ ಪೋಸ್ಟಲ್ ಕಾಲೊನಿಯಲ್ಲಿನ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಕ್ವಾರ್ಟರ್ಸ್‌ನಲ್ಲಿಯೇ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಲನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ವಾಣಿಜ್ಯ ವಿದ್ಯಾರ್ಥಿಯಾಗಿದ್ದು, ಪಾಲ್ಘರ್ ಜಿಲ್ಲೆಯಲ್ಲಿ ತಾಯಿ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. BARCನಲ್ಲಿ ಕೆಲಸ ಮಾಡುವ ತನ್ನ ತಂದೆಯನ್ನು ಭೇಟಿ ಮಾಡಲು ಅವರು ಮುಂಬಯಿಗೆ ಬಂದಿದ್ದರು. ಅವರಿಗೆ ಮುನ್ಸಿಪಲ್ ಆಸ್ಪತ್ರೆಯ ಎದುರು ಇರುವ ಸಂಕೀರ್ಣದ ಕಟ್ಟಡವೊಂದರಲ್ಲಿ ಅವರಿಗೆ ಫ್ಲಾಟ್ ನೀಡಲಾಗಿತ್ತು.
ಮೊದಲ ಆರೋಪಿಯನ್ನು 26 ವರ್ಷದ ಅಜಿತ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದ್ದು, ಇವರ ಮತ್ತೊಬ್ಬ ಮಗ ಮತ್ತೊಂದು ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿನಿ ಅಡುಗೆಗಾಗಿ ಕೆಲವು ಪದಾರ್ಥಗಳನ್ನು ಪಡೆಯಲು ಅಜಿತ್ ಅವರ ಮನೆಗೆ ಹೋಗಿದ್ದಳು. ಆಗ ಆರೋಪಿತರು ತಂಪು ಪಾನೀಯದ ಬಾಟಲಿ ನೀಡಿದ್ದಾರೆ. ಪಾನಿ ಸೇವಿಸಿದ ನಂತರ ವಿದ್ಯಾರ್ಥಿನಿ, ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಇಬ್ಬರೂ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಕಟ್ಟಡದಲ್ಲಿನ ಹಲವರಿಗೆ ಈ ವಿಷಯ ತಿಳಿಸಿದ್ದಾರೆ. ಆನಂತರ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳ ತನಿಖೆ ನಡೆಸುತ್ತಿದ್ದಾರೆ.