ಅಪ್ರಾಪ್ತ ಮಗನ ಎದುರಲ್ಲೇ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಸಂಬಂಧಿಕರು..!
ಬಿಹಾರ : ವಿಧವೆ ಮೇಲೆ ರರಾಕ್ಷಸರಂತೆ ಎರಗಿರುವ ಕಾಮುಕರು ಆಕೆಯ ಅಪ್ರಾಪ್ತ ವಯಸ್ಸಿನ ಮಗನ ಎದುರಲ್ಲೇ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಹೌದು ಆಕೆಯ 13 ವರ್ಷದ ಕಿರಿಯ ಪುತ್ರನೊಂದಿಗೆ ವಾಸವಾಗಿದ್ದು, ಆಕೆಯ ಹಿರಿಯಮಗ 16 ವರ್ಷ ವಯಸ್ಸಿನ ಬಾಲಕ ಸೂರತ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಮಧ್ಯರಾತ್ರಿ ಗೆಳೆಯನೊಂದಿಗೆ ಮನೆಗೆ ಬಂದಿದ್ದ ಆಕೆಯ ಸಹೋದರಿಯ ಪತಿ ಸುಖದೇವ್ ಮತ್ತು ಸೋದರಮಾವ ಮಹೇಂದ್ರ ಯಾದವ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆಗೆ ಸುಮಾರು 30 ವರ್ಷ ವಯಸ್ಸಾಗಿದೆ. ಭೂವಿವಾದದ ಕಾರಣಕ್ಕೆ ಸಂಬಂಧಿಗಳ ನಡುವೆ ತಕರಾರು ಇದ್ದು, ಇದೇಕಾರಣಕ್ಕೆ ಈ ಕೃತ್ಯ ಎಸಗಿರೋದಾಗಿ ತಿಳಿದುಬಮದಿದೆ. ಇನ್ನೂ ಆಕೆಯ ಕಿರಿಯ ಮಗ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು,ಪೊಲೀಸರು ಮಹಿಳೆಯ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.