ಶಾಲೆಗೆ ಹೋಗುವುದನ್ನ ತಪ್ಪಿಸಲು ಸಾಮೂಹಿಕ ಅತ್ಯಾಚಾರದ ಕಥೆ ಕಟ್ಟಿದ ಬಾಲಕಿ
ಕೇರಳ : ಅಪ್ರಾಪ್ತ ಬಾಲಕಿಯೊಬ್ಬಳು ಶಾಲೆಗೆ ಹೋಗುವುದನ್ನ ತಪ್ಪಿಸಲು ಐವರ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪ ಮಾಡಿ ಇದೀಗ ಸಿಕ್ಕಿಬಿದ್ದಿರೋ ಘಟನೆ ಕೇರಳದಲ್ಲಿ ನಡೆದಿದೆ. ಹೌದು ಈ ಬಾಲಕಿ ಶಾಲೆಗೆ ಹೋಗೋದನ್ನ ತಪ್ಪಿಸಲು ರಸ್ತೆ ಮಧ್ಯದಲ್ಲಿ ಐವರು ಅತ್ಯಾಚಾರವೆಸಿದ್ದಾಗಿ ಸುಳ್ಳು ಹೇಳಿದ್ದಾಳೆ. ಪೊಲೀಸರು ತಿಳಿಸಿರುವಂತೆ ಈಕೆ ಸ್ಮಾರ್ಟ್ ಫೋನ್ ಗೆ ಅಡಿಕ್ಟ್ ಆಗಿದ್ದಳು. ಆನ್ ಲೈನ್ ಗೇಮ್ಸ್ ಗೆ ಅಡಿಕ್ಟ್ ಆಗಿದ್ದು, ಮನೆಯಲ್ಲೇ ಇದ್ದು ಗೇಮ್ ಗಳನ್ನ ಆಡೋ ಸಲುವಾಗಿ ಈ ರೀತಿ ಮಾಡಿದ್ದಾಲೆ ಎನ್ನಲಾಗಿದೆ.
ಮೊದಲಿಗೆ ಶಾಲೆಗಳು ಪುನರಾರಂಭವಾದ ಬಳಿಕ ಆಕೆ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಆದ್ರೆ ಪೋಷಕರ ಒತ್ತಾಯದ ನಂತರ ಶಾಲೆಗೆ ಹೋಗಲಾರಂಭಿಸಿದ್ದಾಳೆ. ಇದಕ್ಕೂ ಮುನ್ನ ಲಾಕ್ ಡೌನ್ ನಿಂದಾಗಿ ಈಕೆ 2 ವರ್ಷಗಳ ಕಾಲ ಮೊಬೈಲ್ ಗೆ ಅಡಿಕ್ಟ್ ಆಗಿದ್ದಳು. ಊಟ ಮಾಡುವಾಗಲೂ ನಿದ್ದೆ ಮಾಡುವಾಗಲೂ, ಯಾವಾಗಲೂ ಸದಾ ಫೋನ್ ಕೈನಲ್ಲೇ ಹಿಡಿದುಕೊಂಡಿರುತ್ತಿದ್ದಳು. ಆದ್ರೆ ಸಾಲೆಯಿಂದಾಗಿ ಮೊಬೈಲ್ ನಿಂದ ದೂರಾದ ಹಿನ್ನೆಲೆ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಹೀಗಾಗಿಯೇ ಈಕೆ ಪೋಷಕರ ಬಳಿ ಐವರು ರಸ್ತೆ ಮಧ್ಯದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ಕಥೆ ಕಟ್ಟಿದ್ದಾಳೆ. ಆಕೆಯ ಪೋಷಕರು ತೆರಳಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಬಖಳಿಕ ಪೊಲೀಸರು ಸ್ಥಳ ಪರಿಶೀಲಿಸಿ ಸಿಸಿಟಿವಿ ದೃಶ್ಯಗಳನ್ನ ನೋಡಿ, ಸ್ಥಳೀಯರ ಬಳಿಯೂ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಅಲ್ಲದೇ ಹುಡುಗಿ ಆರೋಪಿಸಿ ವ್ಯಕ್ತಿಗಳು ಕೂಡ ಆ ಜಾಗದಲ್ಲಿ ಇಲ್ಲದೇ ಇರುವುದು ಪೊಲೀಸರ ಗಮನಕ್ಕೆ ಬಂದಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗಲೂ ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂಬ ಸತ್ಯ ಗೊತ್ತಾಗಿದೆ. ನಂತರ ಬಾಲಕಿಯನ್ನ ಕರೆದೊಯ್ದು ಗಂಭೀರವಾಗಿ ವಿಚಾರಿಸಿದಾಗ ಬಾಲಕಿ ಸತ್ಯ ಬಾಯ್ಬಿಟ್ಟಿದ್ದಾಳೆ. ಆದ್ರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.. ಯಾರಾದ್ರೂ ಬಾಲಕಿಯಿಂದ ಸುಳ್ಳು ಆರೋಪ ಮಾಡಿಸುವ ಪ್ರಯತ್ನ ಮಾಡಿದ್ದಾರಾ ಎಂಬುದನ್ನ ತಿಳಿಯುವ ಪ್ರಯತ್ನ ಮಾಡ್ತಿದ್ದಾರೆ.