Gangaapur: ವೃದ್ದೆಯ ದೇಹವನ್ನ ಕಚ್ಚಿ ತಿಂದ ನಾಯಿಗಳು – ಮನಕಲುಕುವ ಘಟನೆ.
ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನ ನಾಯಿಗಳು ಜೀವಂತ ಕಚ್ಚಿ ತಿಂದಿರುವ ಹಾಕಿರುವ ಮನಕಲುಕುವ ಘಟನೆ ಅಫಜಲ್ ಪುರ ಗಾಣಗಾಪುರದಲ್ಲಿ ನಡೆದಿದೆ.
ದತ್ತಾತ್ರೇಯ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಕಳೆದ ರಾತ್ರಿ ರಸ್ತೆ ಬದಿ ಮಲಗಿದ್ದ ವೃದ್ದೆಯ ಮೇಲೆ ನಾಯಿಗಳು ದಾಳಿ ಮಾಡಿವೆ. ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು, ಸಂಬಂಧಿಕರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದರು. ಕಳೆದ 4 ದಿನಗಳ ಹಿಂದೆ ವೃದ್ಧೆಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ವೃದ್ಧೆಯ ಕಾಲಿಗೆ ಗಾಯವಾಗಿದ್ದರಿಂದ ಗೂಡ್ಸ್ ವಾಹನ ಚಾಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಸಿದ್ದನು. ಚಾಲಕ ಚಿಕಿತ್ಸೆ ಕೊಡಸಿದ ನಂತರ ಕರೆತಂದು ರಸ್ತೆ ಬದಿ ಬಿಟ್ಟೋಗಿದ್ದನು.
ಗಾಯಾಳು ವೃದ್ಧೆ ಕಳೆದ ರಾತ್ರಿ ರಸ್ತೆ ಬದಿ ಮಲಗಿದಾಗ ನಾಯಿಗಳು ವೃದ್ದೆಯನ್ನು ತಿಂದಿವೆ. ಇಂದು (ಅ.16) ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಮತ್ತು ಪೊಲೀಸರು ವೃದ್ಧೆಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವೃದ್ದೆ ಯಾವ ಊರು ಹೆಸರು ಏನು ಎಂದು ತಿಳಿದು ಬಂದಿಲ್ಲ.
Gangaapur: Dogs bite old man’s body and eat it – a shocking incident.