ಬಿಡುಗಡೆಯ ದಿನ 10.50 ಕೋಟಿ ಗಳಿಸಿದ ಗಂಗೂಬಾಯಿ ಕಥಿಯಾವಾಡಿ…
ಆಲಿಯಾ ಭಟ್ ಅಭಿನಯದ ಗಂಗೂ ಬಾಯಿ ಕಥಿಯಾವಾಡಿ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಮೆಲ್ಲಗೆ ಸದ್ದು ಮಾಡುತ್ತಿದೆ. ಫೆಬ್ರವರಿ 25 ರಂದು ಬಿಡುಗಡೆಯಾದ ಮೊದಲ ದಿನ ಸುಮಾರು 10.50 ಕೋಟಿ ಗಳಿಸಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರಕುತ್ತಿದೆ. ಆಲಿಯಾ ಭಟ್ ಅಭಿನಯವನ್ನ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾ ಎರಡನೇ ದಿನವೂ ಉತ್ತಮ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫಿಸ್ ವರದಿಯ ಪ್ರಕಾರ ಚಿತ್ರ ಸುಮಾರು 12 ರಿಂದ 13 ಕೋಟಿ ಲಾಭ ಮಾಡಿದೆ.
ಚಿತ್ರದ ಮೊದಲ ದಿನ ಮುಂಬೈ ಮತ್ತು ಆಂಧ್ರಪ್ರದೇಶದ ನಿಜಾಮ್ ಭಾಗದಲ್ಲಿ ಉತ್ತಮವಾಗಿ ಓಡಿದೆ. ಎರಡನೇ ದಿನ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಜನರನ್ನ ಥಿಯೇಟರ್ ಗೆ ಸೆಳೆಯಲು ಸಫಲವಾಗಿದೆ. ಸಿನಿಮಾ ವಾರಾಂತ್ಯದ ವೇಳೆಗೆ 37 ರಿಂದ 38 ಕೋಟಿ ನಿವ್ವಳ ಲಾಭ ಮಾಡಿವ ನಿರೀಕ್ಷೆ ಇದೆ ಎಂದು ಬಾಕ್ಸ್ ಆಫಿಸ್ ಪಂಡಿತರು ಹೇಳುತ್ತಿದ್ದರೆ.
ಚಿತ್ರದ ಬಗ್ಗೆ ಮಾತನಾಡುವುದಾದರೆ. ಗಂಗೂಬಾಯಿ ಕಥಿಯಾವಾಡಿ ಬಾಲಿವುಡ್ ನಟಿಯಾಗಲು ಬಯಸಿ ಮುಂಬೈ ಗೆ ಬರುವ ಗುಜರಾತ್ನ ಯುವತಿಯ ಕಥೆಯನ್ನು ಹೊಂದಿದೆ. ತನ್ನ ಗೆಳೆಯನಿಂದ ಮೋಸ ಹೋಗಿ ಅನ್ಯರಿಗೆ ಮಾರಾಟವಾಗುತ್ತಾಳೆ. ನಂತರ ಮುಂಬೈನ ಕಾಮಾಟಿಪುರದ ವೇಶ್ಯಾಗೃಹದಲ್ಲಿ ಸಿಲಿಕಿಕೊಳ್ಳುತ್ತಾಳೆ. ಅಲ್ಲಿಂದ ಗಂಗೂಬಾಯಿ ಕಥಿಯಾವಾಡಿ ಮಾಫಿಯಾ ರಾಣಿಯಾಗುವತ್ತ ಬೆಳೆಯುವ ಪಯಣವನ್ನ ಚಿತ್ರದಲ್ಲಿ ತೋರಿಸಲಾಗಿದೆ.
ರೆಡ್ ಲೈಟ್ ಏರಿಯಾದ ಅಧ್ಯಕ್ಷೆಯಾಗಿ ಮಾಫಿಯಾ ಕ್ವೀನ್ ಆಗಿ ಲೈಂಗಿಕ ಕಾರ್ಯಕರ್ತೆಯಯಾಗಿ ಹಕ್ಕುಗಳಿಗಾಗಿ ಹೋರಾಟ ಮಾಡುವ ಗಂಗೂಬಾಯಿ ಕಥಿಯಾವಾಡಿ ಪಾತ್ರದಲ್ಲಿ ಆಲಿಯಾ ಭಟ್ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾಳೆ.
ಎಸ್. ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕದ ಕಥೆ ಆಧರಿಸಿ ಚಿತ್ರವನ್ನ ತೆಗೆಯಲಾಗಿದೆ. ಅಜಯ್ ದೇವಗನ್ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.