ಈ ಕಂಪೆನಿಯ ಚಪ್ಪಲಿ ಧರಿಸಿ – ಲಕ್ಷ ರೂಪಾಯಿ ವೇತನ ಪಡೆಯಿರಿ !

1 min read
Slippers

ಈ ಕಂಪೆನಿಯ ಚಪ್ಪಲಿ ಧರಿಸಿ – ಲಕ್ಷ ರೂಪಾಯಿ ವೇತನ ಪಡೆಯಿರಿ !

ಲಂಡನ್, ಜನವರಿ13: ಯುಕೆ ನ ವಿರಾಮ ಉಡುಪು ಕಂಪನಿ, ಬೆಡ್ರೂಮ್ ಅಥ್ಲೆಟಿಕ್ಸ್, ತನ್ನ ಬ್ರಾಂಡ್ ನ‌ ಚಪ್ಪಲಿಗಳನ್ನು ಪ್ರಯತ್ನಿಸಲು ಸ್ಲಿಪ್ಪರ್ ಪರೀಕ್ಷಕನನ್ನು ಹುಡುಕುತ್ತಿದೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

Slippers

ಈ ಕಂಪನಿಯ ಚಪ್ಪಲಿ ಧರಿಸಿ, ನಿಮ್ಮ ಅನುಭವವನ್ನು ಹಂಚಿಕೊಂಡರೆ ನಿಮಗೆ ಲಕ್ಷ ರೂಪಾಯಿ ವೇತನ ಸಿಗಲಿದೆ. ‌ ಸಂಭಾವ್ಯ ಅಭ್ಯರ್ಥಿಗಳು ಲೋಫರ್‌(loafers) ನಿಂದ ಸ್ಲೈಡ್ ಒನ್ಸ್ ( slide-ons) ನಡುವಿನ ವ್ಯತ್ಯಾಸವನ್ನು ಅಥವಾ ಹೆಚ್ಚಾಗಿ ಸ್ಲಿಪ್ಪರ್ ಕಾಲ್ಚೀಲದ ನಡುವಿನ ವ್ಯತ್ಯಾಸವನ್ನು ತಿಳಿದಿರುವ ಸ್ಲಿಪ್ಪರ್ ಅಭಿಜ್ಞರಾಗಿರಬೇಕು.

ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು ಹೊಚ್ಚಹೊಸ ಚಪ್ಪಲಿ ಉತ್ಪನ್ನಗಳನ್ನು ಧರಿಸಲು ಮತ್ತು ಪರೀಕ್ಷಿಸಲು ಆಯ್ಕೆಯಾದ ಅಭ್ಯರ್ಥಿಗಳನ್ನು ಕೇಳಲಾಗುತ್ತದೆ. ಅವರು ಪ್ರತಿ ಉತ್ಪನ್ನವನ್ನು ತಿಂಗಳಿಗೆ ಎರಡರಂತೆ, 12 ತಿಂಗಳ ಅವಧಿಯಲ್ಲಿ 12-ಗಂಟೆಗಳವರೆಗೆ ಧರಿಸಬೇಕಾಗುತ್ತದೆ ಮತ್ತು ಚಪ್ಪಲಿಯ ರಿವ್ಯೂ ನೀಡಬೇಕಾಗುತ್ತದೆ.
ಸ್ಲಿಪ್ಪರ್ ಪರೀಕ್ಷಕರಿಗೆ ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡುತ್ತದೆ. ವೇತನದ ಜೊತೆಗೆ, ಪರೀಕ್ಷಕರು ಕಂಪನಿಯಿಂದ ಹೋಮ್‌ವೇರ್ ಮತ್ತು ಉಡುಪುಗಳನ್ನು ಸಹ ಪಡೆಯುತ್ತಾರೆ

ಇದು ಯುಕೆ ಯಲ್ಲಿರುವ ಕಂಪನಿಯಾದರೂ ಜಗತ್ತಿನಾದ್ಯಂತ ಯಾರು ಬೇಕಾದರೂ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಜಮ್ಮು ಕಾಶ್ಮೀರದ ಸ್ಥಾನಮಾನ ಪುನಃಸ್ಥಾಪಿಸುವವರೆಗೆ ಭಾರತದ ಜೊತೆಗೆ ಮಾತುಕತೆಯಿಲ್ಲ – ಇಮ್ರಾನ್ ಖಾನ್

ಪ್ರಸ್ತುತ ಕಂಪನಿಯಲ್ಲಿ ಎರಡು ವೇಕೆನ್ಸಿಗಳಿದ್ದು, ಈ ಪೈಕಿ ಒಂದಕ್ಕೆ ಮಹಿಳಾ ಅಭ್ಯರ್ಥಿ ಬೇಕಿದ್ದರೆ, ಮತ್ತೊಂದಕ್ಕೆ ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ.
ನೀವು ಕೂಡ ಈ ಉದ್ಯೋಗಕ್ಕೆ ಅಪ್ಲೈ ಮಾಡಲು ಬಯಸಿದರೆ, ಅದಕ್ಕಾಗಿ ನೀವು ‌ಫಾರ್ಮ್‌ ಒಂದನ್ನು ತುಂಬಬೇಕು. www.bedroomathletics.com ವೆಬ್‌ಸೈಟ್‌ನಲ್ಲಿ ಆಸಕ್ತರು ಈ ಲಿಂಕ್‌ನಿಂದ ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಈ ಲಿಂಕ್ ನಲ್ಲಿ ನೀವು ಪರ್ಫೆಕ್ಟ್ ಸ್ಲಿಪ್ಪರ್ ಟೆಸ್ಟರ್ ಆಗಿದ್ದೀರಾ? ಹೇಗೆ? ಮತ್ತು ‌ ಕಂಪನಿ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು ಎಂದು ವಿವರಿಸಬೇಕು. ನಿಮ್ಮ ಉತ್ತರ ಕಂಪನಿಗೆ ಇಷ್ಟವಾದರೆ ನಿಮ್ಮನ್ನು ಆಯ್ಕೆ ‌ಮಾಡುತ್ತದೆ.

Slippers

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಕಳೆದ ವರ್ಷವೂ ಈ ಕಂಪನಿಯು ಸ್ಲಿಪರ್ ಟೆಸ್ಟರ್ ಉದ್ಯೋಗಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಹಾಗಾಗಿ ಕಂಪನಿ ಚಪ್ಪಲಿ ಹೇಗಿದೆ ಎಂಬ ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಉತ್ತಮವಾದ ಚಪ್ಪಲಿ ಹೊರತರುವ ಉದ್ದೇಶವನ್ನು ಹೊಂದಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd