9 ವರ್ಷದ ಹಳೇ ಗ್ಲೂಕೋಸ್ ಗೆ 2021ರ ಲೇಬಲ್ ಹಾಕಿ ಮಾರಾಟ
ಚಿಕ್ಕಮಗಳೂರು : 9 ವರ್ಷದ ಹಿಂದೆ ತಯಾರಾದ ಗ್ಲೂಕೋಸ್ ಪ್ಯಾಕೇಟಿನ ಮೇಲೆ 2021ರ ಲೇಬಲ್ ಹಾಕಿ ಮಾರಾಟ ಮಾಡುತ್ತಿರುವ ಘಟನೆ ಚಿಕ್ಕಮಗಳೂರಿನ ಜನರಿಕ್ ಮೆಡಿಸನ್ ಔಷಧಿ ಕೇಂದ್ರದಲ್ಲಿ ನಡೆದಿದೆ.
ನಿನ್ನೆ ಗುರು ಎಂಬೋದು ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಮೆಡಿಸನ್ ಔಷಧಿ ಕೇಂದ್ರದಲ್ಲಿ ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ.
ಅಂಗಡಿ ಮಾಲೀಕರು 26 ರೂಪಾಯಿ ಇದ್ದ ಗ್ಲೂಕೋಸ್ ಗೆ 13 ರೂಪಾಯಿ ತೆಗೆದುಕೊಂಡಿದ್ದಾರೆ.
ಗ್ಲೂಕೋಸ್ ಖರೀದಿಸಿದ ಗುರುವಿಗೆ ಪ್ಯಾಕೇಟ್ ಮೇಲೆ ಹೊಸ ಲೇಬಲ್ ಅಂಟಿಸಿರೋದು ಗೊತ್ತಾಗಿದೆ.
ಲೇಬಲ್ ತೆಗೆದು ನೋಡಿದಾಗ ಮೂಲ ಪ್ಯಾಕೇಟ್ ಮೇಲಿದ್ದ 2012ನೇ ಇಸವಿಗೆ ಬ್ಲಾಕ್ ಮಾರ್ಕರ್ನಿಂದ ರಬ್ ಮಾಡಿ ಅದರ ಮೇಲೆ 2021ನೇ ಇಸವಿಯ ಲೇಬಲ್ ಹಾಕಿದ್ದಾರೆ.
ಇದನ್ನ ಗಮಿನಿಸಿದ ಗುರು ಕೂಡಲೇ ತನ್ನ ಚಿಕ್ಕಪ್ಪನ ಮೂಲಕ ಅದೇ ಮೆಡಿಕಲ್ ಸ್ಟೋರ್ ನಿಂದ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ.
ಅದರ ಮೇಲೂ ಅದೇ ರೀತಿಯ ಲೇಬಲ್ ಹಾಕಿರುವುದು ಕಾಣಿಸಿದೆ. ಅದನ್ನು ಕಿತ್ತಾಗಲು ಆ ಪ್ಯಾಕೇಟ್ ಕೂಡ 2012ರಲ್ಲಿ ತಯಾರಾಗಿರುವುದಾಗಿತ್ತು.
ಸದ್ಯ ಈ ಬಗ್ಗೆ ಗುರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.