ಭಾರತದ ಹಿರಿಯ ಟೆನ್ನಿಸ್ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಹಾಗೂ ರುತುಜಾ ಭೋಸತೆ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಶನಿವಾರ ನಡೆದ ಏಷ್ಯನ್ ಗೇಮ್ಸ್ ನ ಮಿಶ್ರ ಡಬಲ್ಸ್ ನಲ್ಲಿ ಭಾರತೀಯ ಜೋಡಿಯಾದ ಬೋಪಣ್ಣ ಹಾಗೂ ಭೋಸತೆ ಅವರು ಚೈನೀಸ್ ತೈಪೆ ಜೋಡಿ ವಿರುದ್ಧ 2-6, 6-3(10)-(4) ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಭಾರತದ ಖಾತೆಯಲ್ಲಿ 35 ಪದಕಗಳು ಬಂದಿದ್ದು, 9ನೇ ಚಿನ್ನ ಇದಾಗಿದ್ದು, ಶೂಟಿಂಗ್ ನಲ್ಲಿ ಬಾರತೀಯರ ಪಾರುಪತ್ಯ ಮುಂದುವರೆದಿದ್ದು, ಹಲವು ಪದಕಗಳು ಅಲ್ಲಿಂದಲೇ ಬಂದಿವೆ.