ದೇಶದಲ್ಲಿ ಉಂಟಾಗಿರುವ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಬಿಕ್ಕಟ್ಟು ಹಾಗೂ ಮುಂಗಾರು ಮಳೆ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಕೇಂದ್ರ ಸರ್ಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದಿಂದಲೇ ಆದೇಶ ಜಾರಿಯಾಗಿದೆ.
ಆಹಾರ ಭದ್ರತೆ ಮತ್ತು ಸಂಪರ್ಕ ವ್ಯತ್ಯಯ ತಡೆಗೆ ಮುಂದಾದ ಕೇಂದ್ರ
ಭಾರೀ ಮಳೆಯ ಸಮಯದಲ್ಲಿ, ವಿಶೇಷವಾಗಿ ಹಿಮಾಲಯದ ಬಂಡಾರಿ ಪ್ರದೇಶಗಳು ಹಾಗೂ ಇತರ ದುರ್ಗಮ ಪ್ರದೇಶಗಳಲ್ಲಿ ತ್ವರಿತ ಪಡಿತರ ವಿತರಣೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಮುಂಗಡ ಪಡಿತರ ವಿತರಣೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೂ ಮುಂಗಾರು ಅವಧಿಯಲ್ಲೂ ನಿರ್ಬಂಧವಿಲ್ಲದೆ ಆಹಾರ ಭದ್ರತೆ ದೊರಕಿಸಿಕೊಡುವ ಉದ್ದೇಶ ಹೊಂದಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣಾ ವ್ಯವಸ್ಥೆ
ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳ ಮೂಲಕ ನಡೆಯಲಿದೆ. ಪ್ರತಿಯೊಂದು ಬಿಪಿಎಲ್ ಕಾರ್ಡ್ ಸದಸ್ಯನಿಗೂ ತಲಾ 15 ಕೆಜಿ ಅಕ್ಕಿ ನೀಡಲಾಗುತ್ತದೆ. ಈ ಪಡಿತರ ವಿತರಣೆಯು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳು ಸೇರಿ ಒಳಗೊಂಡಿರುತ್ತದೆ. ಭಾರತೀಯ ಆಹಾರ ನಿಗಮ (ಎಫ್ಸಿಐ) ಈ ಕುರಿತಾಗಿ ವಿವಿಧ ರಾಜ್ಯಗಳಿಗೆ ಅಗತ್ಯ ಆಹಾರ ಧಾನ್ಯಗಳನ್ನು ತಲುಪಿಸಲು ತಯಾರಿ ನಡೆಸಿದೆ.
ರಾಜ್ಯ ಸರ್ಕಾರದ ನಿರ್ಧಾರ ನಿರೀಕ್ಷೆ
ಇನ್ನು ಮುಂಗಡ ಪಡಿತರ ಯೋಜನೆಯಡಿ ರಾಜ್ಯ ಸರ್ಕಾರವು ಕೇಂದ್ರದ ಆದೇಶವನ್ನು ಅನುಸರಿಸಿದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯನಿಗೂ ತಲಾ 10 ಕೆಜಿ ಆಹಾರಧಾನ್ಯ ದೊರೆಯಲಿದೆ. ಈ ಕ್ರಮದಿಂದ 3 ತಿಂಗಳಲ್ಲಿ ಒಟ್ಟು 30 ಕೆಜಿ ಧಾನ್ಯ ವಿತರಣೆ ಸಾಧ್ಯವಾಗುತ್ತದೆ.
ಈ ನಿರ್ಧಾರವು ಬಿಪಿಎಲ್ ಕುಟುಂಬಗಳಿಗೆ ಅತ್ಯಂತ ಅನುಕೂಲಕರವಾಗಿದ್ದು, ಮುಖ್ಯ ಆಹಾರಗಳ ಲಭ್ಯತೆ, ಬೆಲೆ ಏರಿಕೆ ಹಾಗೂ ತುರ್ತು ಪರಿಸ್ಥಿತಿಗಳ ಸಮಯದಲ್ಲಿ ತೊಂದರೆ ಇಲ್ಲದಂತೆ ಬದುಕಲು ನೆರವಾಗಲಿದೆ. ಕೇಂದ್ರ ಸರ್ಕಾರದ ಈ ಹೆಜ್ಜೆ ರಾಷ್ಟ್ರದ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ವರದಾನವಾಗಲಿದೆ.








