ಸಿನಿಮಾಮಂದಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ನಾಳೆಯಿಂದ ಚಿತ್ರಮಂದಿರಗಳು ಓಪನ್ cinema
ಬೆಂಗಳೂರು : ಸಿನಿಮಾಮಂದಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ನಾಳೆಯಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಗ್ನೀನ್ ಸಿಗ್ನಲ್ ಕೊಟ್ಟಿದೆ.
ಇಂದು ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ರ ಕುರಿತು ಚರ್ಚೆ ನಡೆಸಿದರು. ಈ ಸಭೆಯಲ್ಲಿ ನಾಳೆಯಿಂದ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ಚಿತ್ರಮಂದಿರ ತೆರೆಯಲು ಅವಕಾಶ ನೀಡಿಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದ್ದು, ನಾಳೆಯಿಂದ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿಗೊಳಿಸಲಾಗುತ್ತಿದೆ. ಈ ಮಾರ್ಗಸೂಚಿಯಂತೆ ನೈಟ್ ಕಪ್ರ್ಯುನ್ನು ರಾತ್ರಿ 10 ರಿಂದ ಬೆಳಗ್ಗೆ 5 ರ ವರಗೆ ವಿದಿಸಲು ತೀರ್ಮಾನಿಸಲಾಗಿದೆ. ಸಿನಿಮಾ ಥಿಯೇಟರ್, ರಂಗಮಂದಿರಗಳನ್ನು ಶೇ. 50ರಷ್ಟು ಜನರೊಂದಿಗೆ ತೆರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬುದಾಗಿ ತಿಳಿಸಿದೆ.
ಇದಲ್ಲದೆ ಕಾಲೇಜುಗಳ ಓಪನ್ ಗೆ ಅವಕಾಶ ನೀಡಲಾಗಿದೆ. ಸಿಮ್ಮಿಂಗ್ ಪೂಲ್, ಪಬ್ ಗೆ ಅವಕಾಶ ಕೊಟ್ಟಿಲ್ಲ.