ಈ ಕೆಟ್ಟ ಜಗತ್ತಿಗೆ ವಿದಾಯ..! ಪೋಸ್ಟ್ ಹಾಕಿ ಜಯಶ್ರೀ ರಾಮಯ್ಯ ನಾಪತ್ತೆ..!
ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ನಾಪತ್ತೆಯಾಗಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ಐ ಕ್ಟಿಟ್..!! ಗುಡ್ಬೈ..ವರ್ಡ್ ಅಂಡ್ ಡಿಪ್ರೆಶನ್..(i quit !! goodby to…wolrd and depression) ಎಂದು ಬರೆದುಕೊಂಡು ನಂತರ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಉಪ್ಪು ಖಾರ ಉಳಿ ಚಿತ್ರದಲ್ಲಿ ನಟಿಸಿದ್ದ ಜಯಶ್ರೀ ರಾಮಯ್ಯ ಅವರಿಗೆ ಇತ್ತೀಚಿನ ದಿನಗಳಲ್ಲಿನ ಯಾವುದೇ ಹೆಚ್ಚಿನ ಆಫರ್ಗಳು ಬಂದಿರಲಿಲ್ಲ.
ಬಿಗ್ಬಾಸ್ ನಂತರ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಜಯಶ್ರೀ, ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ಹೆಚ್ಆರ್ ಕೆಲಸದ ಜತೆಗೆ ಮಾಡೆಲಿಂಗ್ನಲ್ಲಿ ತೊಡಿಸಿಕೊಂಡಿದ್ದರು.

ಸಿನಿಮಾಗಳಲ್ಲಿ ಅಭಿನಯಿಸಲು ಆಫರ್ ಬಾರದ ಹಿನ್ನೆಲೆಯಲ್ಲಿ ಜಯಶ್ರೀ ರಾಮಯ್ಯ ಡಿಪ್ರೆಶನ್ಗೆ ಒಳಗಾಗಿದ್ದರು ಎನ್ನಲಾಗಿದೆ. ಕಳೆದ ಮಾರ್ಚ್ನಿಂದ ಲಾಕ್ಡೌನ್ ಆದ ಪರಿಣಾಮ ಚಿತ್ರರಂಗದ ಚಟುವಟಿಕೆಗಳು ಇಂದಿಗೂ ಪುನಾರಂಭಗೊಂಡಿಲ್ಲ. ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಂಡಿದ್ದ ಚಿತ್ರಗಳೂ ಇನ್ನೂ ಸೆಟ್ಟೇರಿಲ್ಲ.
ಕೊರೊನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಇನ್ನೂ ಪೂರ್ಣಪ್ರಮಾಣದ ಅನುಮತಿ ಕೊಟ್ಟಿಲ್ಲ. ಜತೆಗೆ ಮಾರ್ಚ್ನಿಂದ ಚಿತ್ರಮಂದಿರಗಳ ಬಾಗಿಲುಗಳು ತೆರೆದಿಲ್ಲ. ಹೀಗಾಗಿ ಕನ್ನಡ ಚಿತ್ರೋದ್ಯಮ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಚಿತ್ರೋದ್ಯಮ ನಂಬಿದ್ದ ಸಾವಿರಾರು ಕಲಾವಿದರು, ತಂತ್ರಜ್ಞರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.
ಲಾಕ್ಡೌನ್ ಕೂಡ ಜಯಶ್ರೀ ರಾಮಯ್ಯ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ. ಒಂದು ಕಡೆ ಆಫರ್ಗಳು ಇಲ್ಲ, ಮತ್ತೊಂದೆಡೆ ಲಾಕ್ಡೌನ್. ಹೀಗಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಜಯಶ್ರೀ, ಇತ್ತೀಚೆಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಜಯಶ್ರೀ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಹಗೂ ಸ್ನೇಹಿತರು ಆತಂಕಕ್ಕೆ ಒಳಗಾಗಿದ್ದಾರೆ. ಅವರು ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟ್ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬಂತಿದೆ. ಈ ಪೋಸ್ಟ್ ನೋಡಿದ ಹಲವು ಮಂದಿ ಸ್ನೇಹಿತರು ಜಯಶ್ರೀ ಸಂಪರ್ಕಕ್ಕೆ ಯತ್ನಿಸಿದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಆಸ್ಪತ್ರೆಯಲ್ಲಿದ್ದಾರೆ ನಟಿ ಜಯಶ್ರೀ..!
ಕೆಲ ಆಪ್ತ ಸ್ನೇಹಿತೆಯರ ಪ್ರಕಾರ ನಟಿ ಜಯಶ್ರೀ ಅವರಿಗೆ ಏನೂ ಆಗಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ಮುಂದುವರೆದಿದೆ. ಹೀಗಾಗಿ ಆಪ್ತರು, ಅಭಿಮಾನಿಗಳು ಆತಂಕಪಡುವುದು ಬೇಡ ಎಂದು ಜಯಶ್ರೀ ಸ್ನೇಹಿತೆ ಅಶ್ವತಿ ಮಾಹಿತಿ ನೀಡಿದ್ದಾರೆ.









