ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ಹೈಕೋರ್ಟ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತಂತೆ ತಕ್ಕ ಕ್ರಮ ಕೈಗೊಳ್ಳುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕೊರಿಯರ್ ಮತ್ತು ಪಾರ್ಸೆಲ್ ಸೇವೆಗಳ ಹೆಸರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದ ಜಾರಿ ಪ್ರಕ್ರಿಯೆ ಆರಂಭ:
ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಲು ಹೈಕೋರ್ಟ್ ಕೊಟ್ಟ 6 ವಾರಗಳ ಕಾಲಾವಧಿ ಈಗ ಮುಗಿದಿದೆ. ಆ ಆದೇಶದಂತೆ ನಾವು ಈಗ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸರ್ಕಾರದ ನಿಲುವು ಯಾವದು ಎಂಬುದನ್ನು ಹೈಕೋರ್ಟ್‌ಗೆ ಈಗಾಗಲೇ ವಿವರಿಸಿದ್ದೇವೆ, ಎಂದು ಸಚಿವರು ಸ್ಪಷ್ಟಪಡಿಸಿದರು.
ಅಕ್ರಮ ಸೇವೆಗಳ ವಿರುದ್ಧ ಕ್ರಮ:
ಕಾನೂನು ಬಾಹಿರವಾಗಿ, ಲೈಸೆನ್ಸ್ ಇಲ್ಲದೆ, ಸಾಗಾಟ ಕಾರ್ಯ ನಡೆಯುತ್ತಿರುವ ಬಗ್ಗೆ ಸರ್ಕಾರ ತೀವ್ರ ಗಮನ ಹರಿಸಿದ್ದು, ಇಂತಹ ಸೇವೆಗಳ ನಿಯಂತ್ರಣಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.