ಆಸ್ತಿಗಾಗಿ ನಿವೃತ್ತ ಸೈನಿಕರೊಬ್ಬರನ್ನು ಅವರ ಮೊಮ್ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದೆಹಲಿಯ ಆದರ್ಶ ನಗರದಲ್ಲಿ ನಡೆದಿದೆ. ಆರೋಪಿಯನ್ನು 35 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. 1985 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದ ಮಾಜಿ ಹವಾಲ್ದಾರ್ ಭೋಜರಾಜ್ ತಮ್ಮ ಪಿಂಚಣಿ ಹಣವನ್ನು ತನ್ನ ಇಬ್ಬರು ಪುತ್ರರಾದ ಜಯವೀರ್ ಮತ್ತು ಸುರೇಶಗೆ ನೀಡುತ್ತಿದ್ದರು. ಅಲ್ಲದೇ, ಅವರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದರು. ಹೀಗಾಗಿ ಗ್ರಾಮದಲ್ಲಿ ಪ್ರತ್ಯೇಕವಾಗಿದ್ದರು.
ಆದರೆ, ಇದೇ ಪಿಂಚಣಿ ಹಣದ ವಿಚಾರವಾಗಿ ಸುರೇಶ ಅವರ ಪುತ್ರ ಪ್ರದೀಪ್ ಭೋಜರಾಜ್ ಜತೆ ವಾಗ್ವಾದ ನಡೆದಿದೆ. ಆಗ ಮೊಮ್ಮಗ ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಗಾಯಗೊಂಡಿದ್ದ ಭೋಜರಾಜ್ ತೀವ್ರವಾಗಿ ಗಾಯಗೊಂಡಿದ್ದು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕೊಲೆ ಪ್ರಕರಣ ದಾಖಲಾಗಿದ್ದು, ಪ್ರದೀಪ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.