Greece Train Accident : ಭೀಕರ ರೈಲು ಅಫಘಾತಕ್ಕೆ 29 ಮಂದಿ ಸಾವು ; 85 ಮಂದಿ ಗಾಯ…
ಗ್ರೀಸ್ ದೇಶದಲ್ಲಿ ರೈಲು ರೈಲು ಅಪಘಾತ ಸಂಭವಿಸಿದೆ. ಪ್ಯಾಸೆಂಜರ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಸುಮಾರು 29 ಮಂದಿ ಪ್ರಾಣ ಕಳೆದುಕೊಂಡಿದ್ದು, 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾರ್ಚ್ 1 ಅಂದರೇ ಇಂದು ಬೆಳಿಗ್ಗೆ ನಸುಕಿನ ಜಾವ ಪ್ಯಾಸೆಂಜರ್ ರೈಲು ಎದುರಿಗೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಮೂರಿ ಬೋಗಿಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಅಫಘಾತದ ತೀವ್ರತೆಗೆ ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಅಥೆನ್ಸ್ನಿಂದ ಉತ್ತರಕ್ಕೆ 235 ಮೈಲುಗಳಷ್ಟು ದೂರದಲ್ಲಿರುವ ಟೆಂಪೆ ಎಂಬ ಸಣ್ಣ ಪಟ್ಟಣದ ಬಳಿ ಹಲವಾರು ರೈಲು ಹಳಿತಪ್ಪಿದೆ. ಅಪಘಾತದ ವೇಳೆ ರೈಲಿನಲ್ಲಿ 350ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಕೈಗೊಂಡಿದೆ.
ಅಪಘಾತದಿಂದ ಪಾರಾಗಲು ಹಲವು ಪ್ರಯಾಣಿಕರು ಕಿಟಕಿಯಿಂದ ತೂರಿ ಹೊರಬಂದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಗ್ರೀಸ್ನ ಅಗ್ನಿಶಾಮಕ ಮುಖ್ಯಸ್ಥ ವಸ್ಸಿಲಿಸ್ ವರ್ತಕೊಯಾನಿಸ್ ಹೇಳಿದ್ದಾರೆ.
Greece Train Accident: 29 people died in a terrible train accident; 85 injured